ಮಂಗಳೂರು:(ಜು.22) ಜುಲೈ ತಿಂಗಳಿನಲ್ಲಿ ಮಳೆ ನಿರಂತರ ಅಬ್ಬರಿಸಿರುವುದರಿಂದ ಸುಮಾರು 6 ವರ್ಷಗಳ ಬಳಿಕ ಜಿಲ್ಲೆಯ ಅಡಿಕೆ ಕೃಷಿಕರಿಗೆ ಮತ್ತೆ ಕೊಳೆರೋಗದ ಭೀತಿ ಎದುರಾಗಿದೆ. ಈಗಾಗಲೇ ಕೆಲವೆಡೆ ಕೊಳೆ ರೋಗದ ಸೂಚನೆ ಸಿಕ್ಕಿದೆ.
ಇದನ್ನೂ ಓದಿ: https://uplustv.com/2024/07/22/belthangadi-ಶಾಲೆಗಳಲ್ಲಿ-ಹಿಂದೂ-ಹಬ್ಬಗಳ-ಆಚರಣೆಗೆ-ರಾಜ್ಯ-ಸರ್ಕಾರ-ನಿರ್ಬಂಧ-ಖಂಡಿಸಿ
ಮುಂದೆ ಬಿಸಿಲು ಬರದೆ ಹೋದರೆ ಮಹಾಳಿ ರೋಗ ವ್ಯಾಪಕವಾಗಿ ಕಾಡುವ ಸಾಧ್ಯತೆ ಇದೆ. 2018ರಲ್ಲಿ ಕೊನೆಯ ಬಾರಿಗೆ ಜಿಲ್ಲೆಯಲ್ಲಿ ಕೊಳೆರೋಗ ಕಾಣಿಸಿಕೊಂಡಿತ್ತು, ಆ ಬಳಿಕದ ವರ್ಷಗಳಲ್ಲಿ ಜುಲೈ ತಿಂಗಳಿನಲ್ಲಿ ಮಳೆ ಕ್ಷೀಣವಾಗಿ ಸುರಿದಿದ್ದು, ಮಧ್ಯೆ ಹಲವು ದಿನ ಬಿಸಿಲಿನ ವಾತಾವರಣವೇ ಇತ್ತು.
ಹಾಗಾಗಿ ರೋಗಬಾಧೆ ಇರಲಿಲ್ಲ. ಇದ್ದರೂ ಕೆಲವು ಕಡೆ ಮಾತ್ರ ಕಾಣಿಸಿಕೊಂಡಿತ್ತು. ಆದರೆ ಈ ಬಾರಿ ಕಳೆದ ಸುಮಾರು 15-20 ದಿನಗಳಿಂದ ಮಳೆ ತೀವ್ರ ಹೆಚ್ಚಾಗಿದೆ, ಅಲ್ಲದೆ ಒಂದು ವಾರದಿಂದ ಬಿಡುವಿಲ್ಲದೆ ಸುರಿಯುತ್ತಲೇ ಇದೆ.
ವಾತಾವರಣದ ತಾಪಮಾನವೂ 18ರಿಂದ 22 ಡಿಗ್ರಿ .ಕೆ. ಅನುಪಾಸಿನಲ್ಲಿರುವುದು, ಜತೆಗೆ ಅದ್ರಮತಿ ಶೇ. 85-90ರಷ್ಟು ಇರುವುದು ಮಹಾಳಿ ರೋಗಕ್ಕೆ ಕಾರಣವಾಗುವ ಶಿಲೀಂದ್ರ ಕ್ಷಿಪ್ರವಾಗಿ ಬೆಳವಣಿಗೆ ಮತ್ತು ಪ್ರಸಾರಗೊಳ್ಳುವುದಕ್ಕೆ ಪೂರಕ ಪರಿಸ್ಥಿತಿ ಸೃಷ್ಟಿಸಿದೆ. ಇದು ಕೊಳೆರೋಗದ ಭೀತಿ ಹೆಚ್ಚಾಗಲು ಕಾರಣ.
ಜಿಲ್ಲೆಯಲ್ಲಿ ಮಳೆಗಾಲಕ್ಕೆ ಮೊದಲು ಹಾಗೂ ಮಳೆಗಾಲದ ಮಧ್ಯೆ ಬಿಸಿಲಿರು ವಾಗ ಶಿಲೀಂದ್ರ ತಡೆಗೆ ಬೋರ್ಡೋ ದ್ರಾವಣ ಸಿಂಪಡಣೆ ನಡೆಯುವುದು ರೂಢಿ. ಈ ಬಾರಿ ಇದು ಎಲ್ಲ ಕಡೆ ಪೂರ್ತಿಯಾಗಿಲ್ಲ.
ಕೆಲವು ಕಡೆ ಮೇ ಎರಡನೇ ವಾರದಿಂದಲೇ ಆರಂಭ ಗೊಂಡ ಮಳೆ ಬಿಟ್ಟಿಲ್ಲ. ಹಾಗಾಗಿ ಔಷಧ ಸಿಂಪಡಣೆ ಸರಿಯಾಗಿ ಆಗಿಲ್ಲ, ಕೆಲವು ಕಡೆ ನಡೆದಿದೆಯಾದರೂ ಭಾರೀ ಮಳೆಯಿಂದಾಗಿ ಅದರ ಪರಿಣಾಮ ಹೆಚ್ಚು ದಿನ ಉಳಿಯಲಾರದು ಎನ್ನುವುದು ಆತಂಕಕ್ಕೆ ಕಾರಣ.
ಜಿಲ್ಲೆಯಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯ ಲಾಗುತ್ತಿದ್ದು, ಸರಾಸರಿ ಸುಮಾರು 3,700 ಮೆಟ್ರಿಕ್ ಟನ್ ಅಡಿಕೆ ಸಿಗುತ್ತಿದೆ. 2018ರಲ್ಲಿ 33,350 ಹೆಕ್ಟೇರ್ ಪ್ರದೇಶ ಕೊಳೆರೋಗ ಬಾಧಿತವಾಗಿದ್ದು, 60 ಕೋ. ರೂ. ಪರಿಹಾರ ಪ್ಯಾಕೇಜ್‌ಗೆ ತೋಟಗಾರಿಕೆ ಇಲಾಖೆಯಿಂದ ಪ್ರಸ್ತಾ ಮನೆ ಹೋಗಿದ್ದರೂ ಸಿಕ್ಕಿರಲಿಲ್ಲ.
ಅದಕ್ಕೂ ಹಿಂದೆ 2013ರಲ್ಲಿ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶ ಕೊಳೆ ರೋಗಕ್ಕೆ ತುತ್ತಾಗಿದ್ದರೆ, 2007ರಲ್ಲಿ 20 ಸಾವಿರ ಅಡಿಕೆ ಕೃಷಿಕರ ತೋಟ ರೋಗಕ್ಕೆ ಸಿಲುಕಿತ್ತು. 2013ರಲ್ಲಿ 30 ಕೋ. ರೂ. 2007ರಲ್ಲಿ 4.59 ಕೋ.ರೂ. ಪ್ಯಾಕೇಜ್ ಘೋಷಣೆಯಾಗಿದ್ದರೆ ಅಲ್ಪಸ್ವಲ್ಪ ಮಾತ್ರ ವಿತರಣೆಯಾಗಿತ್ತು ಎನ್ನುತ್ತಾರೆ ಕೃಷಿಕರು.