Wed. Nov 20th, 2024

Viral News: ಆಗುಂಬೆಯಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ

Viral Video: ಕಾಳಿಂಗ ಸರ್ಪ ಈ ಜಗತ್ತಿನ ಅತಿ ಉದ್ದವಾದ ಹಾಗೂ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಇದರ ಆಕಾರ, ಬುಸುಗುಡುವಿಕೆ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತದೆ.

ಇದನ್ನೂ ಓದಿ: https://uplustv.com/2024/07/22/bengaluru-ಎಲ್ಲಿ-ಪ್ರೀತಿ-ಪ್ರಾರಂಭವಾಯಿತೋ-ಅಲ್ಲಿಯೇ

ಇಂತಹ ದೈತ್ಯ ಗಾತ್ರದ ಕಾಳಿಂಗ ಸರ್ಪಗಳು ಮನುಷ್ಯರ ಕಣ್ಣಿಗೆ ಕಾಣಸಿಗುವುದು ಬಲು ಅಪರೂಪ. ಆದ್ರೆ ಮಲೆನಾಡ ಪ್ರದೇಶಗಳಲ್ಲಿ ಈ ದೈತ್ಯ ಸರ್ಪಗಳು ಆಗೋಮ್ಮೆ ಈಗೊಮ್ಮೆ ಕಾಣ ಸಿಗುತ್ತವೆ.

ಇದೀಗ ಇಲ್ಲೊಂದು 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಜನ ವಸತಿ ಪ್ರದೇಶದಲ್ಲಿ ಕಾಣಿಸಿದ್ದು, ಇದರ ರಕ್ಷಣಾ ಕಾರ್ಯದ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಭಯಾನಕ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ.

ಆಗುಂಬೆ ರೈನ್‌ ಫಾರೆಸ್ಟ್‌ ಸಂಶೋಧನಾ ಕೇಂದ್ರದ ಫೀಲ್ಡ್‌ ಡೈರೆಕ್ಟರ್‌ ಅಜಯ್‌ ಗಿರಿ (ajay_v_giri) ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಆಗುಂಬೆ ಸಮೀಪದ ಮನೆಯೊಂದರ ಕಾಂಪೌಂಡ್‌ ಬಳಿಯಿದ್ದ ಗಿಡವೊಂದರ ಮೇಲೆ 12 ಅಡಿ ಉದ್ದದ ಹಾವು ಹಾಯಾಗಿ ಕುಳಿತಿರುವ ದೃಶ್ಯವನ್ನು ಕಾಣಬಹುದು.

ಆ ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಎಆರ್‌ಆರ್‌ಎಸ್‌ ತಂಡ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *