ನವದೆಹಲಿ ( ಜುಲೈ 23) : ಮೋದಿ 3.0 ಸರಕಾರದ ಮೊದಲ ಬಜೆಟ್ ನಲ್ಲಿ ರೈಲ್ವೆ ಮತ್ತು ಟ್ರಾನ್ಸ್ಪೋಟೇಷನ್ ವಲಯಕ್ಕೆ ಒತ್ತು ನೀಡಿದ್ದು 26ಸಾವಿರ ಕೋಟಿ ರೂ. ಗಳನ್ನು ಪ್ರಮುಖ ಹೆದ್ದಾರಿ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. ಅದರಲ್ಲೂ ಪ್ರಮುಖವಾಗಿ ದ್ವಿಪಥ ರಸ್ತೆಗಳು ಮತ್ತು ಎಕ್ಸ್ಪ್ರೆಸ್ ರಸ್ತೆಗಳಿಗೆ ಕೇಂದ್ರ ಸರಕಾರದಿಂದ ಅನುದಾನ ದೊರೆಯಲಿದೆ. ಹೈದರಾಬಾದ್ ಮತ್ತು ಬೆಂಗಳೂರು ನಡುವೆ ಕಾರಿಡಾರ್ ನಿರ್ಮಾಣ ಕೂಡಾ ಘೋಷಿಸಲಾಗಿದೆ. ರೈಲ್ವೆ ಯೋಜನೆಗಳಿಗೂ ಕೂಡ 26 ಸಾವಿರ ಕೋಟಿ ರೂಗಳನ್ನು ಕೇಂದ್ರ ಸರಕಾರ ಮೀಸಲಿಟ್ಟಿದೆ.