ನವದೆಹಲಿ (ಜುಲೈ 23): ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ, ಸೇವೆ, ಸಂಶೋಧನೆಗೆ ಒತ್ತು ನೀಡಲಾಗಿದೆ. ಮೋದಿ ಆಡಳಿತದಲ್ಲಿ ಅರ್ಥಸೇವೆಗೆ ಶರವೇಗ ದೊರೆತಿದೆ. ಬಡತನ ನಿರ್ಮೂಲನೆ, ಕೃಷಿಗೆ ಪ್ರಾಮುಖ್ಯತೆ ನೀಡಲಾಗಿದೆ.
ಕಿಸಾನ್ ಕಾರ್ಡ್ ಮೂಲಕ ರೈತರಿಗೆ ನೆರವು ನೀಡುವುದರಿಂದ 6 ಕೋಟಿ ರೈತರ ಏಳಿಗೆಗೆ ಸ್ಪಂದನೆ ನೀಡುವುದು ಹಾಗೂ ಕೃಷಿ ವಲಯಕ್ಕೆ 1.52 ಲಕ್ಷ ಕೋಟಿ ಮೀಸಲಿಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆರ್ಥಿಕತೆಗೆ ಒತ್ತು ನೀಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದರು.
ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ತರಕಾರಿ ಬೆಳೆಗಳ ಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸುವುದು ಕೂಡಾ ಈ ಬಾರಿಯ ಬಜೆಟ್ ನಲ್ಲಿ ಸ್ಥಾನ ಪಡೆದಿದೆ.