Wed. Nov 20th, 2024

Belthangady: ಮಂಗಳೂರು ಎಂ ಐ ಯು ನಲ್ಲಿ ಕ್ಯಾನ್ಸರ್ ರೋಗಿಗಳಿಗೆ ನೇರ ದಾಖಲಾತಿಗೆ ಅವಕಾಶ ನೀಡಬೇಕು – ಕೇಂದ್ರದ ಪರಿಸ್ಕೃತ ದರಪಟ್ಟಿ ರಾಜ್ಯದಲ್ಲೂ ಜಾರಿಯಾಗಬೇಕು- ಸದನದಲ್ಲಿ ಶಾಸಕ ಹರೀಶ್ ಪೂಂಜ ಆಗ್ರಹ

ಬೆಳ್ತಂಗಡಿ:(ಜು.24) ಕೇಂದ್ರ ಸರ್ಕಾರ ಬಡವರಿಗೋಸ್ಕರ ಯೋಜಿಸಿರುವ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಪಡೆಯಲು ಮಂಗಳೂರಿನಲ್ಲಿರುವ ಪ್ರಸಿದ್ಧ ಕ್ಯಾನ್ಸರ್ ಆಸ್ಪತ್ರೆ MIO ನಲ್ಲಿ ಎಲ್ಲಾ ರೋಗಿಗಳಿಗೆ ಜಿಲ್ಲಾಸ್ಪತ್ರೆಯ ಮಾನ್ಯತಾ ಪತ್ರ ಇಲ್ಲದೆ ನೇರವಾಗಿ ದಾಖಲಾತಿಯಾಗುವಂತೆ ಅವಕಾಶ ಮಾಡಿಕೊಡಬೇಕು.

ಇದನ್ನೂ ಓದಿ: https://uplustv.com/2024/07/24/dharmasthala-ಉಚಿತ-ಟೈಲರಿಂಗ್-ತರಬೇತಿ-ಶಿಬಿರದ-ಸಮಾರೋಪ

ಇತರೆ ರಾಜ್ಯದಿಂದ ಬಂದ ರೋಗಿಗಳಿಗೆ ಈ ಸೌಲಭ್ಯ ಈಗಾಗಲೇ ಇದ್ದು, ನಮ್ಮ ರಾಜ್ಯದ ರೋಗಿಗಳಿಗೆ ಇದರಿಂದಾಗಿ ಸಮಸ್ಯೆ ಉಂಟಾಗುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಇದರ ಜೊತೆಗೆ ಆಯುಷ್ಮಾನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ 2022 ನೆಯ ಪರಿಷ್ಕೃತ ದರ ಪಟ್ಟಿಯನ್ನು ರಾಜ್ಯ ಸರ್ಕಾರವು ಬೇರೆ ರಾಜ್ಯಗಳ ಮಾದರಿಯಲ್ಲಿ ಅಂಗೀಕರಿಸಿ ಜಾರಿ ಮಾಡಬೇಕೆಂದು ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡ ಚಿತ್ರರಂಗ ಹಾಗು ರಂಗಭೂಮಿ ಕಲಾವಿದರ ಹಿತ ರಕ್ಷಣೆಯ ದೃಷ್ಟಿಯಿಂದ ರಚಿಸಲಾದ ಮಸೂದೆಗೆ ಸಹಮತ ಸೂಚಿಸಿ ಇದೆ ಮಸೂದೆಯ ಅಡಿಯಲ್ಲಿ ಕರಾವಳಿ ಭಾಗದ ತುಳು ಚಿತ್ರರಂಗ, ಯಕ್ಷಗಾನ ಹಾಗೂ ತುಳು ರಂಗಭೂಮಿಯ ಕಲಾವಿದರನ್ನು ಸೇರ್ಪಡೆಗೊಳಿಸುವಂತೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಸರ್ಕಾರವನ್ನು ಒತ್ತಾಯಿಸಿದರು.

Leave a Reply

Your email address will not be published. Required fields are marked *