Wed. Nov 20th, 2024

Sunny Mahipal: Terrible assault on wife by TV actor!! Engagement with another person after marriage

ಕನ್ನಡದ ನೇತ್ರಾವತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟ ಸನ್ನಿ ಮಹಿಪಾಲ್ ಈಗಾಗಲೇ ಒಂದು ಮದುವೆ ಆಗಿದ್ರೂ ಮತ್ತೊಂದು ನಿಶ್ಚಿತಾರ್ಥ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿಗೆ ಥಳಿಸಿ ಗರ್ಭಪಾತ ಆಗಿದೆ ಎಂಬ ಸ್ಪೋಟಕ ಅಂಶ ಬಹಿರಂಗವಾಗಿದೆ.

ಮೊದಲ ಮದುವೆ..!

ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆಯೊಂದಿಗೆ ಸ್ನೇಹ, ಪ್ರೀತಿ ಅಂತ ಪರಿಚಯವಾಗಿ ಬಳಿಕ ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ವಿವಾಹವಾಗಿದ್ದಾನೆ. ಜೂನ್ 15 ರಂದು ಯುವತಿ ಸನ್ನಿ ಮಹಿಪಾಲ್ ನನ್ನು ವಿವಾಹವಾಗಿದ್ದಾಳೆ. ಇಬ್ಬರು ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು.

ಸದ್ಯಕ್ಕೆ ಮಹಿಳೆ ಎರಡು ತಿಂಗಳು ಒಂದು ವಾರದ ಗರ್ಭಿಣಿಯಾಗಿದ್ದಾಳೆ ಎಂದು ಹೇಳಿಕೊಂಡಿದ್ದಾಳೆ. ಸದ್ಯ ಸನ್ನಿ ಮಹಿಪಾಲ್ ಖಾಸಗಿ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಸದ್ಯ ಸಂತ್ರಸ್ತೆ 2 ತಿಂಗಳ ಗರ್ಭಿಣಿಯಾಗಿದ್ದು, ಹೀಗಿರುವಾಗಲೇ ನಟ ಸನ್ನಿ ಬೇರೊಂದು ಹುಡುಗಿ ಜೊತೆ ಎಂಗೇಜ್‌ಮೆAಟ್ ಮಾಡಿಕೊಂಡಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಈ ವಿಚಾರ ತಿಳಿದ ಪತ್ನಿ ಆತನನ್ನು ಪ್ರಶ್ನಿಸಲು ಜುಲೈ 22 ರಂದು ರಾತ್ರಿ ಮಹಿಪಾಲ್ ಮನೆಗೆ ಹೋಗಿದ್ದಾಳೆ. ರಾತ್ರಿ 9.30 ಕ್ಕೆ ಆತನ ಮನೆಗೆ ಹೋಗಿದ್ದಾಳೆ.

ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿಗೆ ಸನ್ನಿ ಚಾಕುವಿನಿಂದ ತೋಳಿಗೆ ಇರಿದು ಹಲ್ಲೆ ಮಾಡಿದ್ದಾನೆ ಅಂತ ಸಂತ್ರಸ್ತೆ ಆರೋಪಿಸಿದ್ದಾಳೆ. ಆದ್ರೆ ಸನ್ನಿ ಮಹಿಳೆಯ ವಿರುದ್ಧವೇ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜ್ಞಾನ ನಗರದಲ್ಲಿರುವ ಮಹಿಪಾಲ್ ನಿವಾಸಕ್ಕೆ ಹೋಗಿದ್ದಾಳೆ. ಈ ವೇಳೆ ಗಲಾಟೆಯಾಗಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಚಾಕುವಿನಿಂದ ತೋಳಿಗೆ ಇರಿದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಮಾತ್ರವಲ್ಲದೆ ಗಲಾಟೆಯಲ್ಲಿ ಹೊಟ್ಟೆಗೆ ಏಟಾಗಿ ಗರ್ಭಪಾತ ಆಗಿರೋದಾಗಿ ಪತ್ನಿ ಹೇಳಿಕೆ ನೀಡಿದ್ದಾಳೆ.

ಗರ್ಭಪಾತದಿಂದಾಗಿ ಮಹಿಳೆಗೆ ರಕ್ತಸ್ರಾವವಾಗುತ್ತಿತ್ತು. ಕೂಡಲೇ ಆಕೆ 112 ಗೆ ಕರೆ ಮಾಡಿದ್ದಾಳಂತೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ಆಕೆ ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಿಗೆ ಮನವಿ ಮಾಡಿದ್ದಳಂತೆ. ಆದರೆ ನಮ್ಮ ಹತ್ತಿರ ಮಹಿಳಾ ಸಿಬ್ಬಂದಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂದು ಮಹಿಪಾಲ್ ಪತ್ನಿ ದೂರಿದ್ದಾರೆ.

ಕೊನೆಗೆ ದಿಕ್ಕು ತೋಚದೆ ಮಹಿಪಾಲ್ ಪತ್ನಿ ಕಾರು ಚಲಾಯಿಸಿಕೊಂಡು ಬಂದು ಆಸ್ಪತ್ರೆ ಸೇರಿದ್ದಾರೆ. ಸದ್ಯ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Leave a Reply

Your email address will not be published. Required fields are marked *