Wed. Nov 20th, 2024

Ujire: ಉಜಿರೆ ಗ್ರಾಮ ಪಂಚಾಯತ್ ಗೆ ಲಕ್ಷ ದ್ವೀಪದ ಅಧಿಕಾರಿಗಳು ಭೇಟಿ- ಕಚೇರಿ ಗ್ರಂಥಾಲಯ, ತ್ಯಾಜ್ಯ ಸಂಪನ್ಮೂಲ ಘಟಕ ಹಾಗೂ ಮಲ ತ್ಯಾಜ್ಯ ನಿರ್ವಹಣಾ ಘಟಕ ವೀಕ್ಷಣೆ- ಮೆಚ್ಚುಗೆ

ಉಜಿರೆ:‌ (ಜು.24) ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮ ಪಂಚಾಯತ್ ನಿರ್ಮಾಣಗೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಲತ್ಯಾಜ್ಯ ನಿರ್ವಹಣಾ ಘಟಕದ ಮಾಹಿತಿ ಪಡೆಯಲು ಲಕ್ಷದ್ವೀಪ ರಾಜ್ಯದ ಅಧಿಕಾರಿಗಳ ತಂಡ

ಇದನ್ನೂ ಓದಿ:https://uplustv.com/2024/07/24/mangalore-ರಸ್ತೆ-ಸಾರಿಗೆ-ಮತ್ತು-ಹೆದ್ದಾರಿ-ಸಚಿವಾಲಯದ-ಜಂಟಿ-ಕಾರ್ಯದರ್ಶಿ-ವಿನಯ್-ಕುಮಾರ್-ರನ್ನು-ಭೇಟಿ-ಮಾಡಿದ-ಕ್ಯಾ-ಬ್ರಿಜೇಶ್-ಚೌಟ

ಇಂದು ಉಜಿರೆ ಗ್ರಾಮ ಪಂಚಾಯತ್‌ ಗೆ ಭೇಟಿ ನೀಡಿ, ಉಜಿರೆ ಗ್ರಾಮ ಪಂಚಾಯತ್ ಕಛೇರಿ ಆಡಳಿತ ವ್ಯವಸ್ಥೆ, ಡಿಜಿಟಲ್ ಗ್ರಂಥಾಲಯ, ಕಸನಿರ್ವಹಣಾ ವ್ಯವಸ್ಥೆ, ಮಾದರಿ ಸಭಾಂಗಣ ಮೊದಲಾದ ಉತ್ತಮ ಅಂಶಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಂಡದಲ್ಲಿ ಲಕ್ಷದ್ವೀಪ ರಾಜ್ಯದ ಅಧಿಕಾರಿಗಳಾದ, ಶ್ರೀ ಸಿ ಎನ್ ರಹಜಾನ್ ಸುಪರಿಟೆಂಟ್ ಇಂಜಿನಿಯರ್ LPWD, ಶ್ರೀ ಪಿ ಪೊಕೊಯ್ಯ DST, ಶ್ರೀ ಮುಶಿನ್ ವಿಜ್ಞಾನಿಗಳು , ಶ್ರೀ ಅಬ್ದುಲ್ ಜಾಬ್ಬರ್ RFO Department of ESF ಭಾಗವಹಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಷಾಕಿರಣ್ ಕಾರಂತ್, ಉಪಾಧ್ಯಕ್ಷರಾದ ರವಿ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಪಿ ಹೆಚ್ ಪ್ರಕಾಶ್ ಶೆಟ್ಟಿ, ಬೆಳ್ತಂಗಡಿ PRED AEE,

ನಿತಿನ್ ಕುಮಾರ್, A.E ಹರ್ಷಿತ್, ಬಂಟ್ವಾಳ ತಾಲೂಕು ಸಹಾಯಕ ನಿರ್ದೇಶಕರಾದ ವಿಶ್ವನಾಥ್, ದ.ಕ.ಜಿಲ್ಲಾ ಪಂಚಾಯತ್ SBM ಶಾಖೆಯ ಡೊಂಬಯ್ಯ ರಾಜ್ಯ CDD ಸಂಸ್ಥೆಯ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *