ಬೆಂಗಳೂರು: (ಜು.25) ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಕಳೆದ ಒಂದು ವಾರದಿಂದ ಹಗರಣಗಳದ್ದೇ ಸದ್ದು. ಮುಡಾ ಸೈಟು ಹಂಚಿಕೆ, ವಾಲ್ಮೀಕಿ ನಿಗಮದಲ್ಲಾಗಿರುವ ಬಹುಕೋಟಿ ಹಗರಣದ ವಿರುದ್ಧ ಹೋರಾಟ ತೀವ್ರಗೊಂಡಿದೆ.
ಇಷ್ಟು ದಿನ ಸದನದ ಬಾವಿಗಿಳಿದು ಹೋರಾಟ ಮಾಡ್ತಿದ್ದ ಬಿಜೆಪಿ, ಜೆಡಿಎಸ್ ಸದಸ್ಯರು ನಿನ್ನೆಯಿಂದ ಆಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಅತ್ತ ದಲಿತರ ಹಣವೂ ಲೂಟಿ, ಇತ್ತ ಮುಡಾವೂ ಲೂಟಿ, ಹಗರಣಗಳ ಸರದಾರ, ಕಾಂಗ್ರೆಸ್ ಸರ್ಕಾರ ಅಂತಾ ಭಿತ್ತಿಪತ್ರ ಹಿಡಿದುಕೊಂಡು ಧರಣಿ ಆರಂಭಿಸಿದ ಬಿಜೆಪಿ, ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದಾರೆ.
ಧರಣಿ ಮುಂದುವರಿಸಿದ ಬಿಜೆಪಿ, ಜೆಡಿಎಸ್ ಸದಸ್ಯರು ತಡರಾತ್ರಿ ಭಜನೆ, ಹಾಡಿನ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಮುಂದುವರಿದ ಭಾಗವಾಗಿ ಇಂದು ಕೂಡ ಸದನದಲ್ಲಿ ಭಾರೀ ಗದ್ದಲಗಳಾಗುವ ಸಾಧ್ಯತೆ ಇದೆ. ಇಂದು ಮುಡಾ ಸೈಟು ಹಂಚಿಕೆ ಹಗರಣವನ್ನು ಎಳೆದು ಕಾಂಗ್ರೆಸ್ ವಿರುದ್ಧ ಎರಗಲು ವಿಪಕ್ಷಗಳು ಮುಂದಾಗಿವೆ.
ಇದನ್ನೂ ಓದಿ: https://uplustv.com/2024/07/25/belthangadiಜು-26-ಭಾ-ಜ-ಪಾ-ಯುವಮೋರ್ಚಾ-ಬೆಳ್ತಂಗಡಿ-ಮಂಡಲ-ವತಿಯಿಂದ-ಕಾರ್ಗಿಲ್-ವಿಜಯ-ದಿವಸ್