ಗುಲ್ಬರ್ಗ:(ಜು.26) ವೈದ್ಯರ ನಿರ್ಲಕ್ಷ್ಯತನದಿಂದ ಯುವಕ ಮರಣಹೊಂದಿರುವ ಘಟನೆ ಗುಲ್ಬರ್ಗ ಹಾರ್ಟ್ ಫೌಂಡೇಷನ್ ಆಸ್ಪತ್ರೆಯಲ್ಲಿ ನಡೆದಿದೆ. ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದ ಶರಣಬಸಪ್ಪ (24) ಮೃತ ಯುವಕ.
ಇದನ್ನೂ ಓದಿ:https://uplustv.com/2024/07/26/sunita-williams-ಸುನಿತಾ-ವಿಲಿಯಮ್ಸ್-ಭಾರತಕ್ಕೆ-ಯಾವಾಗ-ಅಪ್ಡೇಟ್-ನೀಡಿದ-ನಾಸಾ
ಈತನಿಗೆ ಹೊಟ್ಟೆನೋವು ಮತ್ತು ವಾಂತಿಯಾದ ಕಾರಣ ಜುಲೈ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ದಿನಗಳಿಂದ ಡಾಕ್ಟರ್ ಸರಿಯಾಗಿ ಚಿಕಿತ್ಸೆಯನ್ನು ಮಾಡಿರಲಿಲ್ಲ, ಈ ಕಾರಣಕ್ಕಾಗಿ ಬೇರೆ ಆಸ್ಪತ್ರೆಗೆ ಸೇರಿಸಲು ಪೋಷಕರು ನಿರ್ಧರಿಸಿದ್ರು, ಆದ್ರೆ ಬೇರೆ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಬಿಟ್ಟಿಲ್ಲ ಎಂದು ಹೇಳಲಾಗಿದೆ.
ಆಸ್ಪತ್ರೆಯಲ್ಲಿದ್ದರು ಸರಿಯಾಗಿ ನೋಡಿಕೊಳ್ಳಲಿಲ್ಲ, ನಿರ್ಲಕ್ಷ್ಯವನ್ನು ತೋರಿದ್ದಾರೆ ಎಂದು ವೈದ್ಯರ ಮೇಲೆ ಪೋಷಕರು ಆರೋಪವನ್ನು ವ್ಯಕ್ತಪಡಿಸಿದ್ದಾರೆ.