ಮಂಗಳೂರು (ಜು.26): ಪುಲ್ ಟೈಟ್ ಆಗಿ ಮೋರಿಗೆ ಬಿದ್ದಿದ್ದ ಕುಡುಕನನ್ನು ಟ್ರಾಫಿಕ್ ಪೊಲೀಸರು ಮೇಲಕೆತ್ತಿ ರಕ್ಷಣೆ ಮಾಡಿದ ಘಟನೆ ಮಂಗಳೂರಿನ ಪಂಪ್‌ವೆಲ್ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಇದನ್ನೂ ಓದಿ: https://uplustv.com/2024/07/26/ujire-ಉಜಿರೆ-sdm-english-medium-ಸಿ-ಬಿ-ಎಸ್-ಇ-ಶಾಲೆಯಲ್ಲಿ-ಕಾರ್ಗಿಲ್-ವಿಜಯ-ದಿವಸ-ಆಚರಣೆ
ವ್ಯಕ್ತಿಯೊಬ್ಬ ಮದ್ಯದ ನಶೆಯಲ್ಲಿ ಆರೇಳು ಅಡಿ ಆಳವಿದ್ದ ಮೋರಿಗೆ ಬಿದ್ದಿದ್ದಾನೆ. ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ಚರಂಡಿಗಳು ತುಂಬಿ ಹರಿಯುತ್ತಿದೆ. ಸ್ವಲ್ಪ ಹೆಚ್ಚು ಕಮ್ಮಿ ಆದರೂ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಇದನ್ನು ಗಮನಿಸಿದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ.
ಮಂಗಳೂರು ನಗರ ಜೆಪ್ಪಿನಮೊಗರು ಸಂಚಾರಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವಿಲ್ಸನ್ ಫೆರ್ನಾಂಡಿಸ್ ಅವರು ಮೋರಿಗೆ ಇಳಿದು ವ್ಯಕ್ತಿಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪೊಲೀಸರಿಗೆ ಸಾರ್ವಜನಿಕರು ಕೂಡ ಸಹಕರಿಸಿದ್ದಾರೆ.