ಜಾರ್ಖಂಡ್ :(ಜು.26) ನೀಟ್ ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಲೀಕ್ ಆಗಿದೆ. ಜಾರ್ಖಂಡನ್‌ನ ಒಯಾಸಿಸ್ ಹಜಾರಿಬಾಗ್ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: https://uplustv.com/2024/07/26/ujire-ಉಜಿರೆ-sdm-english-medium-ಸಿ-ಬಿ-ಎಸ್-ಇ-ಶಾಲೆಯಲ್ಲಿ-ಕಾರ್ಗಿಲ್-ವಿಜಯ-ದಿವಸ-ಆಚರಣೆ
ಪ್ರಕರಣದಲ್ಲಿ ಸಿಬಿಐ ತಬಿಖೆಯನ್ನು ನಡೆಸಿದೆ. ತನಿಖೆಯ ವರದಿ ಪ್ರಕಾರ ಮಾಸ್ಟರ್ ಮೈಂಡ್ ಪಂಕಜ್ ಕುಮಾರ್ ಅಂತಾ ತಿಳಿದು ಬಂದಿದೆ.
ಪಾಟ್ನಾದಲ್ಲಿ ಪ್ರಶ್ನೆಪತ್ರಿಕೆಯು ಸಿಕ್ಕಿದೆ. ಅದರಲ್ಲಿ ಆ ಪೇಪರ್ ಸಣ್ಣದಾಗಿ ಸುಟ್ಟು ಹೋಗಿದೆ ಎನ್ನಲಾಗಿದೆ.
ಸಿಬಿಐ ತನಿಖಾಧಿಕಾರಿಯು 33 ಸ್ಥಳದಲ್ಲಿ ದಾಳಿ ನಡೆಸಿದೆ, 33 ಮಂದಿಯನ್ನು ಸೆರೆಹಿಡಿಯಲಾಗಿದ್ದು, 15 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಕೆಲವು ಅಧಿಕಾರಿಗಳು ಭಾಗಿಯಾಗಿದ್ದು ಅವ್ರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ಕುರಿತು ಮತ್ತಷ್ಟು ತನಿಖೆಯನ್ನ ತೀವ್ರಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.