ಮೇಷ ರಾಶಿ: ಇಂದು ಕಷ್ಟವಾದರೂ ಸಂತೋಷದಿಂದ ಕೆಲಸವನ್ನು ಮಾಡುವಿರಿ. ಅತ್ಯಂತ ಶ್ರಮವಹಿಸಿ ಕಾರ್ಯವನ್ನು ಮಾಡಲಿದ್ದೀರಿ. ಸಕಾರಾತ್ಮಕ ಚಿಂತನೆಗಳನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಿದೆ. ಸಂಗಾತಿಯನ್ನು ಬಿಟ್ಟಿರುವುದು ಬೇಸರ ತರಿಸಬಹುದು.
ವೃಷಭ ರಾಶಿ: ಬೇರೆಯವರು ಖುಷಿಪಡುವಂತೆ ಮಾತನಾಡುವಿರಿ. ಅಚಾತುರ್ಯದಿಂದ ಅನಾಹುತ ಮಾಡಿಕೊಳ್ಳುವಿರಿ. ಆಲಸ್ಯದಿಂದ ಮೇಲೇಳಬೇಕಾದ ಸ್ಥಿತಿ ಇದೆ. ನಿಮ್ಮ ವಿಚಾರದಲ್ಲಿ ಬೇರೆಯವರು ಮಧ್ಯಪ್ರವೇಶ ಮಾಡುವರು. ಇದು ನಿಮಗೆ ಬಹಳ ಸಿಟ್ಟನ್ನು ತರಿಸೀತು. ಅದನ್ನು ವ್ಯಕ್ತಪಡಿಸಲು ನೀವು ಸೂಕ್ತ ಸಂದರ್ಭವನ್ನು ಹುಡುಕುವಿರಿ.
ಮಿಥುನ ರಾಶಿ: ಇಂದು ಆಪ್ತರು ನಿಮಗೆ ಬರುವ ಸಂಕಟದಲ್ಲಿ ಜೊತೆಯಾಗುವರು. ಧೈರ್ಯದಿಂದ ನೀವು ಇರಬಹುದು. ತಂತ್ರಜ್ಞರಿಗೆ ಉತ್ತಮ ಕೆಲಸ ಸಿಗಲಿದೆ. ಭೋಗವಸ್ತುವಿನ ಜೊತೆ ಹೆಚ್ಚು ಕಾಲಕಳೆಯಲು ಬಯಸುವಿರಿ. ಬಂಧುಗಳ ಒಡನಾಟ ಹೆಚ್ಚಾಗುವುದು. ನಿಮ್ಮ ಗುರಿಯ ಬಗ್ಗೆ ಬಲ್ಲವರು ತಿಳಿಸಬಹುದು.
ಕಟಕ ರಾಶಿ: ಇಂದು ಮೇಲಧಿಕಾರಿಗಳು ನಿಮ್ಮ ಕಾರ್ಯವನ್ನು ವೀಕ್ಷಿಸಬಹುದು. ಅನಾರೋಗ್ಯ ಕಾರಣದಿಂದ ನಿಮ್ಮ ಬಗ್ಗೆಯೇ ನಿಮಗೆ ಜುಗುಪ್ಸೆ ಬರಬಹುದು. ಹಣವನ್ನು ಗಳಿಸುವ ಹಂಬಲವು ಅತಿಯಾಗಿದ್ದರೂ ದಾರಿಗಳು ಮಾತ್ರ ಕಾಣಿಸದೇ ಇದ್ದೀತು. ಮರಣಭೀತಿಯು ನಿಮ್ಮನ್ನು ಕಾಡಬಹುದು. ಕೆಟ್ಟ ಆಲೋಚನೆಗಳನ್ನು ಬಿಟ್ಟು ಸರಿಯಾದುದರ ಬಗ್ಗೆ ಗಮನವಿರಲಿ.
ಸಿಂಹ ರಾಶಿ: ಇಂದು ನಿಮ್ಮ ಕರ್ತವ್ಯಗಳನ್ನು ಮರೆಯುವ ಸಾಧ್ಯತೆ ಇದ್ದು, ಯಾರೋ ಅದನ್ನು ನೆನಪಿಸಬೇಕಸದೀತು.ನೀವು ಚೆನ್ನಾಗಿ ಇರುವುದು, ಸಂತೋಷದಿಂದ ಮಾತನಾಡುವುದು, ಎಲ್ಲರ ಜೊತೆ ಬೆರೆಯುವುದು ನಿಮ್ಮ ಬಂಧುಗಳಿಗೆ ಅಸಹ್ಯವಾದೀತು.
ಕನ್ಯಾ ರಾಶಿ: ನಿಮಗೆ ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಪಾಲುದಾರಿಕೆ ಸಿಗಬಹುದು. ಗೃಹೋಪಯೋಗಿ ವ್ಯಾಪಾರದಲ್ಲಿ ಮಂದಗತಿ ಇರಲಿದೆ. ಯಂತ್ರೋಪಕರಣದ ಮಾರಾಟಗಾರಿಗೆ ಲಾಭವು ಆಗುವುದು. ಕೆಲಸದ ಸ್ಥಳದಲ್ಲಿ ಎಲ್ಲರೂ ನಿಮ್ಮ ಹಿಡಿತದಲ್ಲಿ ಇರಬೇಕು ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವಿರಿ.
ತುಲಾ ರಾಶಿ: ನಿಮ್ಮದಾದ ಸಂಪತ್ತನ್ನು ಇನ್ನೊಬ್ಬರಿಗೆ ಕೊಡಬೇಕಾಗುವುದು. ಸಹನೆಯನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ನಿಮಗೆ ಎಚ್ಚರಿಕೆ ಇರಲಿ. ಬಹಳ ಆಯಾಸವಾದಂತೆ ಎನಿಸಬಹುದು. ನಿನ್ನೆಯ ಸುಸ್ತಿನಿಂದ ಹೊರಬರಲು ವಿಶ್ರಾಂತಿ ಪಡೆಯುವಿರಿ. ಆಹಾರ ಸೇವನೆಯನ್ನು ಮಾಡಲು ನಿಮ್ಮ ಕ್ರಮವನ್ನು ರೂಢಿಸಿಕೊಳ್ಳುವಿರಿ.
ವೃಶ್ಚಿಕ ರಾಶಿ: ನಿಮ್ಮ ಮಕ್ಕಳ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಈಗಿರುವ ಕೆಲಸವನ್ನು ಬಿಟ್ಟು ಸ್ವಂತ ಉದ್ಯೋಗಕ್ಕೆ ತೊಡಗಬಹುದು. ಅತಿಯಾಗಿ ದೇಹವನ್ನು ದಂಡಿಸಬೇಡಿ. ನಿಮ್ಮ ಸಾಮರ್ಥ್ಯವನ್ನು ನೋಡಿಕೊಳ್ಳಿ. ಹಣವಿದ್ದರೂ ವಾಹನವನ್ನು ಕೊಳ್ಳುವ ಯೋಗ ದೂರವಿದೆ.
ಧನು ರಾಶಿ: ಧಾರ್ಮಿಕ ಕಾರ್ಯಗಳಿಗೆ ಮುಂದಾಳತ್ವವವನ್ನು ವಹಿಸುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಅಕ್ಕಪಕ್ಕದವರ ಜೊತೆ ಅಸಮಾಧಾನ ವ್ಯಕ್ತವಾಗುವುದು. ಸಂಗಾತಿಯ ಜೊತೆ ಸಂತೋಷ ಕೂಟದಲ್ಲಿ ಭಾಗವಹಿಸುವಿರಿ.
ಮಕರ ರಾಶಿ: ಕುಟುಂಬದವರ ಮಾತಿನ ಅಲಕ್ಷ್ಯದಿಂದ ನಿಮಗೆ ಸಮಸ್ಯೆಯಾದೀತು. ಹಿರಿಯರಿಗೆ ತೊಂದರೆಯನ್ನು ಕೊಡಲು ಹೋಗಬೇಡಿ. ಮಕ್ಕಳ ಜೊತೆ ಸಂತೋಷವನ್ನು ಅನುಭವಿಸುವಿರಿ. ಅರ್ಥವಿಲ್ಲದ ವ್ಯರ್ಥ ಮಾತುಗಳನ್ನು ನಿಲ್ಲಿಸುವುದು ಉತ್ತಮ. ನೀವು ಬಯಸಿದ ವಸ್ತುವು ಅನಾಯಾಸವಾಗಿ ದೊರೆಯುವುದು.
ಕುಂಭ ರಾಶಿ: ನಿಮ್ಮ ಮಾತು ಇಂದು ಕೇಳುಗರಿಗೆ ಹಿಂಸೆ ಕೊಡಬಹುದು. ಆಪ್ತರ ಜೊತೆ ಮಾತುಕತೆಗಳು ಆಗಬಹುದು. ಬಯಕೆಯನ್ನು ಬಹಳ ಬಲವಾಗಿ ಹಿಡಿದಿಟ್ಟುಕೊಳ್ಳುವಿರಿ. ತೊಂದರೆಯನ್ನು ತೆಗೆದುಕೊಳ್ಳದೇ ಕೆಲಸವನ್ನು ಮುಗಿಸುವ ಮಾನಸಿಕ ಸ್ಥಿತಿಯನ್ನು ಹೊಂದಿದ್ದೀರಿ. ಇಂದು ನಿಮ್ಮ ಪರೀಕ್ಷೆಯ ಕಾಲವಾಗಿದ್ದು ಸ್ಥೈರ್ಯವು ಕಡಿಮೆ ಆಗುವುದು.
ಮೀನ ರಾಶಿ: ಇಂದು ನೀವು ಸುತ್ತಾಟಕ್ಕೆಂದು ಮಕ್ಕಳ ಜೊತೆ ಹೋಗುವಿರಿ. ಕಡಿಮೆ ವೆಚ್ಚದಲ್ಲಿ ಹೆಚ್ಚು ಸಂಪಾದಿಸುವ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ಎಲ್ಲಿಂದಲಾದರೂ ನಿಮಗೆ ಐಡಿಯಾ ಸಿಗಬಹುದು. ಬೇಡದ ಯೋಚನೆಗಳೇ ನಿಮ್ಮ ತಲೆಯಲ್ಲಿ ಸುತ್ತಬಹುದು. ನಿಮ್ಮದೇ ಮನಸ್ಸಾದರೂ ನಿಮ್ಮ ಮಾತನ್ನು ಕೇಳದೇ ಇದ್ದೀತು. ನೀವು ಅಂದು ಕೊಂಡ ವಿಚಾರಗಳು ನಿಮ್ಮಿಂದ ಆಗಿಲ್ಲ ಎಂಬ ಬೇಸರವು ಉಂಟಾದೀತು.