Wed. Nov 20th, 2024

Uppinangadi: ನೇತ್ರಾವತಿ ನದಿಯ ನೀರಿನಲ್ಲಿದ್ದ ದನವನ್ನು ರಕ್ಷಿಸಿದ ರಕ್ಷಣಾ ತಂಡ

ಉಪ್ಪಿನಂಗಡಿ :(ಜು.26) ನೇತ್ರಾವತಿ ನದಿಯಲ್ಲಿ ತೇಲಿ ಬರುತ್ತಿದ್ದ ಜಾನುವಾರುವೊಂದನ್ನು ಉಪ್ಪಿನಂಗಡಿಯಲ್ಲಿರುವ ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ದೋಣಿಯ ಮೂಲಕ ನದಿ ಮಧ್ಯಕ್ಕೆ ತೆರಳಿ ರಕ್ಷಣೆ ಮಾಡಿ ದಡಕ್ಕೆ ಕರೆದುಕೊಂಡು ಬಂದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ನೇತ್ರಾವತಿ ನದಿಯು ರಭಸದಿಂದ ಹರಿಯುತ್ತಿದ್ದು, ಈ ನದಿಯ ಮಧ್ಯದಲ್ಲಿ ದನವೊಂದು ನದಿ ನೀರಿನಲ್ಲಿ ತೇಲಿಕೊಂಡು ಹೋಗುತ್ತಿರುವುದನ್ನು ಹಳೆಗೇಟು ಬಳಿಯ ದಡ್ಡು ಎಂಬಲ್ಲಿರುವ ಟಯರ್ ಅಂಗಡಿಯ ಮಾಲಕರು ಕಂಡಿದ್ದು,

ಇದನ್ನೂ ಓದಿ: https://uplustv.com/2024/07/26/ksrtc-bus-problem-ಗುಂಡ್ಯ-ಉಪ್ಪಿನಂಗಡಿ-ಮಾರ್ಗದಲ್ಲಿ-ಶಾಲಾ-ಕಾಲೇಜು-ವಿದ್ಯಾರ್ಥಿಗಳಿಗೆ-ನಿರಂತರ-ksrtc-ಬಸ್-ಸಮಸ್ಯೆ-

ಕೂಡಲೇ ದನವು ನದಿಯಲ್ಲಿ ತೇಲಿ ಬರುತ್ತಿದ್ದ ಮಾಹಿತಿಯನ್ನು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಬೀಡು ಬಿಟ್ಟಿರುವ ಪ್ರವಾಹ ರಕ್ಷಣಾ ತಂಡಕ್ಕೆ ನೀಡಿದರು.


ಕಾರ್ಯಪ್ರವೃತ್ತರಾದ ತಂಡ ರಬ್ಬರ್ ದೋಣಿಯ ಮೂಲಕ ಉಪ್ಪಿನಂಗಡಿ ಬಳಿಯ ನೇತ್ರಾವತಿ ನದಿ ಸೇತುವೆಯ ಬಳಿ ತೆರಳಿದ್ದು, ಈ ವೇಳೆ ಎದುರಿನಿಂದ ನದಿಯ ಮಧ್ಯ ಭಾಗದಲ್ಲಿ ದನವು ನೀರಿನಲ್ಲಿ ಕೊಚ್ಚಿಕೊಂಡು ಬರುವುದನ್ನು ಕಂಡು ಅಲ್ಲಿಯೇ ಕಾರ್ಯಾಚರಣೆ ನಡೆಸಿ, ದನವನ್ನು ದೇವಾಲಯದ ಬಳಿ ದಡಕ್ಕೆ ತಂದು ಕಟ್ಟಿ ಹಾಕಿದರು.

ಗೃಹ ರಕ್ಷಕದಳದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಅವರ ನೇತೃತ್ವದ ಕಾರ್ಯಾಚರಣಾ ತಂಡದಲ್ಲಿ ಎ.ಎಸ್.ಎಲ್. ಜನಾರ್ದನ, ಚರಣ್, ಸುದರ್ಶನ್, ಹಾರೀಸ್, ಸಮದ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *