Thu. Dec 26th, 2024

ಪುತ್ತೂರು: ವೃಕ್ಷ ಸಮೃದ್ಧಿ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು: (ಜು.27) ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಮತ್ತು ಶಾಲೆಯ ಪರಿಸರ ಸಂರಕ್ಷಣಾ ಸಮಿತಿ ಇವುಗಳ ಆಶ್ರಯದಲ್ಲಿ

ಇದನ್ನೂ ಓದಿ: https://uplustv.com/2024/07/27/belthangadi-ಬೆಳ್ತಂಗಡಿ-ಉಪ್ಪಿನಂಗಡಿ-ಖಾಸಗಿ-ಬಸ್-ನೌಕರರ-ಸಂಘದ

ಟೀಂ ದಕ್ಷಿಣಕಾಶಿ (ರಿ.) ಉಪ್ಪಿನಂಗಡಿ ಇದರ ಐದನೇ ವರ್ಷದ ವಿನೂತನ ಕಾರ್ಯಕ್ರಮವಾಗಿ ಜುಲೈ 27 ರಂದು ವೃಕ್ಷ ಸಮೃದ್ಧಿಗೆ ಚಾಲನೆ ಎಂಬ ಕಾರ್ಯಕ್ರಮ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಹಿರೆಬಂಡಾಡಿ ಪ್ರೌಢಶಾಲಾ ಕಾರ್ಯಧ್ಯಕ್ಷರಾದ ಸತೀಶ್ ಶೆಟ್ಟಿ ಹೆನ್ನಾಳ ,ಬಿಟ್ಅರಣ್ಯ ರಕ್ಷಣಾಧಿಕಾರಿಗಳಾದ ಸುಧೀರ್ ಹೆಗ್ಡೆ,

ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಧರ್ ಭಟ್ ಕೆ, ಹಿರಿಯರಾದ ಗುಡ್ಡಪ್ಪ ಬಲ್ಯ ಹಾಗೂ ಟೀಮ್ ದಕ್ಷಿಣಕಾಶಿಯ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಪೆರಿಯಡ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾಸ್ತಾವಿಕವನ್ನು ಟೀಮ್ ದಕ್ಷಿಣ ಕಾಶಿಯ ಗೌರವಾಧ್ಯಕ್ಷರಾದ ರವಿ ಇಳಂತಿಲ ಇವರು ನಿರ್ವಹಿಸಿದರು.
ಧನ್ಯವಾದಗಳು ಸಿಹಿ ತಿಂಡಿ ವಿತರಣೆಯೊಂದಿಗೆ ಶಾಲಾ ಮೈದಾನದ ಆವರಣದಲ್ಲಿ ಪ್ರಾರಂಭಿಕ ಹಂತವಾಗಿ 70 ಗಿಡಗಳನ್ನು ನೆಡಲಾಯಿತು.

Leave a Reply

Your email address will not be published. Required fields are marked *