Fri. Apr 11th, 2025

Belthangadi : ಬೆಳ್ತಂಗಡಿ ಪಶು ಆಸ್ಪತ್ರೆ ಶೆಡ್ ನಲ್ಲಿ ಕಾರ್ಮಿಕನ ಶವ ಪತ್ತೆ

ಬೆಳ್ತಂಗಡಿ :(ಜು.27) ಪಶು ಆಸ್ಪತ್ರೆ ಶೆಡ್‌ನಲ್ಲಿ ಮಲಗಿದ ರೀತಿಯಲ್ಲಿ ಕಳಸ ಮೂಲದ‌ ಕೂಲಿ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ.

ಮೃತ ವ್ಯಕ್ತಿ ಕಳಸ ಸಮೀಪದ ಹಿರೆಬೈಲು ನಿವಾಸಿ ಸುಮಾರು 37 ವರ್ಷ ಪ್ರಾಯದ ರವಿ ಎಂದು ಗುರುತಿಸಲಾಗಿದೆ.

ಇವರು ಕಳೆದ ಹಲವು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತಿದ್ದು, ಸಂತೆಕಟ್ಟೆ ಸೇರಿದಂತೆ ಪೇಟೆಯಲ್ಲಿ ರಾತ್ರಿ ಹೊತ್ತು ಮಲಗುತ್ತಿದ್ದರು.

ವಿಪರೀತ ಕುಡಿತದ ಚಟ ಹೊಂದಿದ್ದ ಇವರು ಕಳೆದ ರಾತ್ರಿ ಪಶು ಆಸ್ಪತ್ರೆಯ ಪಶು ಆ್ಯಂಬುಲೆನ್ಸ್ ನಿಲ್ಲಿಸುವ ಶೆಡ್ಡಿನಲ್ಲಿ ಮಲಗಿದ್ದಲ್ಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿಯ ಕೈಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಅಳವಡಿಸಲಾಗುವ ಐವಿ ಡ್ರಿಪ್ ಕಂಡು ಬಂದಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು