Thu. Dec 26th, 2024

Bengaluru: ಮಟನ್ ಜೊತೆ ನಾಯಿ ಮಾಂಸ ಆಮದು- ಅಬ್ದುಲ್ ರಜಾಕ್ ಬದಲು ಪುನೀತ್ ಕೆರೆಹಳ್ಳಿ ಬಂಧನ

ಬೆಂಗಳೂರು:(ಜು.27) ರಾಜಸ್ತಾನದಿಂದ ಬೆಂಗಳೂರಿಗೆ ರೈಲ್ವೆ ಮೂಲಕ ಕುರಿ ಮಾಂಸದ ಜೊತೆಗೆ ನಾಯಿ ಮಾಂಸ ಸೇರಿಸಿ ಸಾಗಿಸಲಾಗುತ್ತದೆ ಎಂಬ ಆರೋಪ ಪ್ರಕರಣದಲ್ಲಿ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ಮಟನ್ ಬಾಕ್ಸ್ಗಳನ್ನ ತಡೆದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವೇಳೆ ಹಿಂದೂಪರ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಪುನೀತ್ ಅವರನ್ನು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದ್ದು, ಆದರೆ ಅಬ್ದುಲ್ ರಜಾಕ್ ನನ್ನು ಯಾಕೆ ಪೊಲೀಸರು ಬಂಧಿಸಿಲ್ಲ ಎಂಬ ಆಕ್ರೋಶದ ಮಾತುಗಳು ಕೇಳಿಬಂದಿದೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಅರೋಪದಡಿ ಪುನೀತ್ ಕೆರೆಹಳ್ಳಿ ಅವರನ್ನ ನಿನ್ನೆ ರಾತ್ರಿ ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಪೊಲೀಸರು. ವಿಚಾರಣೆ ಮುಗಿದ ಬಳಿಕ ಮಲಗಿದ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದ ಪುನೀತ್ ಕೆರೆಹಳ್ಳಿ ನಸುಕಿನ ಜಾವ ಅವರನ್ನ ಆಸ್ಪತ್ರೆ ದಾಖಲಿಸಿ ಪೊಲೀಸರು ಚಿಕಿತ್ಸೆ ಕೊಡಿಸಿದ್ದರು.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಯಾಗಿದ್ದಾರೆಂದು ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರ ವಿರುದ್ಧ ಬಿಎನ್‌ಎಸ್ ಕಾಯ್ದೆ 132, 351,186 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬಿಎನ್ ಎಸ್ 131 ಅಪರಾಧವನ್ನ ಕಾಂಪ್ರಮೈಸ್ ಮಾಡಿಕೊಳ್ಳಲು ಯತ್ನಿಸುವುದು, ಬಿಎನ್ ಎಸ್ 351 ಯಾವುದೇ ವ್ಯಕ್ತಿಗೆ ಬೆದರಿಕೆ ಹಾಕುವುದು, ಬಿಎನ್ ಎಸ್ 186 ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಸೇರಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: https://uplustv.com/2024/07/27/belthangadi-ಬೆಳ್ತಂಗಡಿ-ಪಶು-ಆಸ್ಪತ್ರೆ-ಶೆಡ್-ನಲ್ಲಿ-ಕಾರ್ಮಿಕನ

ಪುನೀತ್ ಕೆರೆ ಹಳ್ಳಿ ಹಾಗೂ ಸಂಗಡಿಗರು ಐಸ್ ಬಾಕ್ಸ್ ಹಿಡಿದುಕೊಂಡು ಸೇವಿಸಲು ಯೋಗ್ಯವಲ್ಲದ ನಾಯಿ ಮಾಂಸದ ದಂದೆಯನ್ನ ಅಬ್ದುಲ್ ರಜಾಕ್ ನಡೆಸುತ್ತಿದ್ದಾರೆಂದು ಘೋಷಣೆ ಕೂಗಿದ್ದರು. ಇದರ ವಿರುದ್ಧ ಯಾವ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಪೊಲೀಸರ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ:

ರಾಜಸ್ತಾನದಿಂದ ಬೆಂಗಳೂರಿಗೆ ತರುವ ಸಾವಿರಾರು ಕೆಜಿ ಮಾಂಸದಲ್ಲಿ ನಾಯಿ ಮಾಂಸ ಸೇರಿಸಲಾಗಿದೆ. ನಾಯಿ ಮಾಂಸ ಸೇರಿಸುವವರನ್ನು ಬಂಧಿಸುವ ಬದಲು. ಅದನ್ನು ತಡೆಯಲು ಹೋದ ಪುನೀತ್ ಕೆರೆಹಳ್ಳಿಯವರ ಮೇಲೆ ಕೇಸ್ ದಾಖಲಿಸಿ ಬಂಧಿಸಿರುವುದು ನಾಚಿಕೆಗೇಡು ಎಂದಿದ್ದಾರೆ.

Leave a Reply

Your email address will not be published. Required fields are marked *