ಮೇಷ ರಾಶಿ: ನಿಮಗೆ ಸಾಧ್ಯವಿರುವ ಕಾರ್ಯಗಳನ್ನು ಮಾತ್ರ ಮಾಡುವಿರಿ. ನೀವು ಅಂದುಕೊಂಡ ರೀತಿಯಲ್ಲಿ ನಡೆಯದೇ ವಿರುದ್ಧವಾಗಿ ನಡೆಯುವುದನ್ನು ಕಂಡು ನಿರಾಸೆಗೊಳ್ಳುವಿರಿ. ಇಂದು ನಿಮ್ಮ ಅನಪೇಕ್ಷಿತ ಹಸ್ತಕ್ಷೇಪದಿಂದ ಲಾಭದ ಹಾದಿಯ ಮೇಲೆ ವಿಪರೀತ ಪರಿಣಾಮ ಉಂಟಾಗಬಹುದು. ಎಲ್ಲವನ್ನೂ ನೀವು ನಿಭಾಯಿಸಲು ಸಾಧ್ಯವಾಗದು.
ವೃಷಭ ರಾಶಿ: ಇಂದು ನಿಮ್ಮ ಬಗ್ಗೆ ತಿಳಿಯದೇ ಸುಮ್ಮನೇ ಕುಖ್ಯಾತಿ ಬರುವುದು. ಒಮ್ಮೆಲೆ ಹತ್ತಾರು ವಿಚಾರಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಇಂದು ನಿಮ್ಮ ಆರ್ಥಿಕ ಮತ್ತು ಕೌಟುಂಬಿಕ ತೊಂದರೆಗಳು ನಿಮ್ಮನ್ನು ಮತ್ತಷ್ಟು ಒತ್ತಡಕ್ಕೆ ಒಯ್ಯಬಹುದು.
ಮಿಥುನ ರಾಶಿ: ನಿಮಗೆ ಇಂದು ತುರ್ತು ಆರ್ಥಿಕ ಸ್ಥಿತಿಯನ್ನು ಎದರಿಸಲು ಕಷ್ಟವಾಗುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಈ ದಿನ ನಿಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ನಿಮ್ಮ ಮೇಲಿನ ಗೌರವ ಹಾಗು ಪ್ರೀತಿಯು ಇರುವುದರಿಂದ ಅಲ್ಲಿಯೇ ಅದು ಮುಕ್ತಾಯವಾಗಬಹುದು.
ಕಟಕ ರಾಶಿ: ಇಂದು ಸಾಲಬಾಧೆಯು ನಿಮಗೆ ಅತಿಯಾದಂತೆ ಭಾಸವಾಗುವುದು. ಅಷ್ಟೇ ಅಲ್ಲದೇ ಸಾಲ ಕೊಟ್ಟವರೂ ನಿಮ್ಮನ್ನು ದಿನವೂ ಕೇಳುವರು. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ದಿನ ನೀವು ಕಠಿಣ ಪರಿಶ್ರಮದ ಅನಂತರ ಅಂದುಕೊಂಡಿದ್ದನ್ನು ಅಲ್ಪ ಸಾಧಿಸುವಿರಿ.
ಸಿಂಹ ರಾಶಿ: ಇಂದು ಉದ್ಯೋಗವನ್ನು ಅರಸುತ್ತ ಇದ್ದರೆ ಇಂದು ಉತ್ತಮ ಉದ್ಯೋಗ ಸುಳಿವು ಸಿಗಲಿದೆ. ಸಿಕ್ಕ ಉದ್ಯೋಗವು ಮುಂದೆ ಅನೇಕ ಲಾಭವನ್ನು ಮಾಡಿ ಕೊಡಲಿದೆ. ಈ ದಿನ ನೀವು ಶುಭ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಆಹಾರದಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳುವಿರಿ.
ಕನ್ಯಾ ರಾಶಿ: ಇಂದು ಹಲವಾರು ದಿನಗಳ ವಾಹನ ಖರೀದಿಯ ಆಸೆಯು ಪೂರ್ಣಗೊಳ್ಳುವುದು. ವಿನಾಕಾರಣ ವಾಗ್ವಾದವನ್ನು ಮಾಡಿಕೊಳ್ಳುವಿರಿ. ಭೂಮಿಯ ವ್ಯವಹಾರದಲ್ಲಿ ನೀವು ಹಣವನ್ನು ಸಂಪಾದಿಸಲಿದ್ದೀರಿ.
ತುಲಾ ರಾಶಿ: ಇಂದು ನಿಮಗೆ ಕಾರ್ಯದಿಂದ ತೃಪ್ತಿ ಸಿಗಲಿದೆ. ನಿಮ್ಮ ದಾಂಪತ್ಯದಲ್ಲಿ ಹೆಚ್ಚಿನ ಸುಖವು ಸಿಗುವ ಸೂಚನೆ ಇರುವುದು. ಕೆಲಸಗಳನ್ನು ಬಹಳ ಸಂಕೀರ್ಣ ಮಾಡಿಕೊಳ್ಳುವಿರಿ. ಸರಳವಾದ ಆಲೋಚನೆಯಿಂದ ನಿಮ್ಮ ಕೆಲಸಗಳು ಸಲೀಸಾಗಬಹುದು. ಭೂಮಿಗೆ ಸಂಬಂಧಿಸಿದಂತೆ ನೆರೆಯವರ ಮಧ್ಯದಲ್ಲಿ ಬಿಸಿಬಿಸಿ ಮಾತುಗಳು ಆಗಬಹುದು.
ವೃಶ್ಚಿಕ ರಾಶಿ: ಇಂದು ನಿಮ್ಮ ಬಲವಂತದ ಪ್ರೇಮ ತಪ್ಪಿಹೋಗುವುದು. ನಿಮಗೆ ಇಷ್ಟವಾದವರ ಜೊತೆ ನಿಮ್ಮ ವಾಯವಿಹಾರ ಮಾಡುವಿರಿ. ಇಂದು ಬಾಯಿ ಚಪಲಕ್ಕೆ ಅಹಿತಕರವಾದ ಆಹಾರವನ್ನು ಸೇವಿಸುವಿರಿ. ಈ ದಿನ ಸಹಜವಾಗಿ ಮುನ್ನಡೆಯುವುದು. ನಿಮ್ಮ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಸಿಕೊಂಡು ಕುಳಿತುಕೊಳ್ಳುವಿರಿ.
ಧನು ರಾಶಿ: ಇಂದು ವಿದ್ಯಾರ್ಥಿಗಳಿಗೆ ತಾಯಿಯಿಂದ ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವರು. ಅಧರ್ಮ ಮಾರ್ಗದಲ್ಲಿ ಹೋಗಲು ಯಾರದರೂ ಪ್ರೇರಣೆ ಕೊಡಬಹುದು. ಈ ದಿನ ನಿಮಗೆ ವಾಹನ ಮತ್ತು ವಸತಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ನೀವು ಉದ್ಯೋಗದ ನಿಮಿತ್ತ ಅಪರಿಚಿತ ಪ್ರದೇಶಕ್ಕೆ ಹೋಗುವಿರಿ.
ಮಕರ ರಾಶಿ: ಇಂದು ನೀವು ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು. ಹಿರಿಯರ ಸಲಹೆಯನ್ನು ಪಡೆಯಿರಿ. ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಇಂದು ನೀವು ಧೈರ್ಯವನ್ನು ಕಳೆದುಕೊಳ್ಳದೇ ಮುನ್ನಡೆಯಿರಿ. ಹಣಕಾಸಿನ ವಿಚಾರದಲ್ಲಿ ಕಛೇರಿಯಲ್ಲಿ ಕಲಹವಾದೀತು. ದಾಖಲೆಗಳನ್ನು ಸರಿಯಾಗಿ ಇಡಿ.
ಕುಂಭ ರಾಶಿ: ಮನೆಯಿಂದ ದೂರವಿರುವ ನಿಮಗೆ ಕುಟುಂಬದವರ ನೆನಪಾಗುವುದು. ಎಂದೋ ಹೂಡಿದ ಹಣವು ಇಂದು ಉಪಯೋಗಕ್ಕೆ ಬರಲಿದೆ. ಇಂದು ನೀವು ಹಣಕಾಸಿನ ವ್ಯವಹಾರಕ್ಕೆ ವಾದ ಮಾಡುವ ಹಾಗೆ ಆಗಬಹುದು. ನಿಮ್ಮ ಕಾರ್ಯಕ್ರಮಗಳು ಎಲ್ಲವೂ ವ್ಯತ್ಯಾಸವಾಗಲಿದೆ. ಯಾರನ್ನೂ ಸಹಿಸಿಕೊಳ್ಳುವ ಸ್ಥಿತಿ ಇರದು.
ಮೀನ ರಾಶಿ: ಇಂದು ನಿಮಗೆ ಎಲ್ಲ ಕಾರ್ಯದಲ್ಲಿಯೂ ಉತ್ಸಾಹವು ಕಡಿಮೆ ಇರುವುದು. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ಇಂದು ನಿಮ್ಮ ಸಮಯವು ಸದುಪಯೋಗವಾಗಿದೆ ಎಂದು ಅನ್ನಿಸಬಹುದು. ನಿಮ್ಮ ಬುದ್ಧಿಯಿಂದ ನಿಮಗೆ ಸಿಗಬೇಕಾದುದನ್ನು ಪಡೆದುಕೊಳ್ಳಬಹುದು. ಮಾತುಗಳಿಂದ ನಿಮ್ಮನ್ನು ಅಳೆಯಬಹುದು. ಇಂದಿನ ಹೆಚ್ಚಿನ ವಿಚಾರಗಳು ನಿಮಗೆ ಸಂಬಂಧವಿಲ್ಲದಿದ್ದರೂ ಅನಿವಾರ್ಯವಾಗಿ ಮಾತನಾಡಬೇಕಾಗಬಹುದು. ಎಲ್ಲರೂ ನಿಮ್ಮ ಮಾತನ್ನು ಕೇಳುವುದಿಲ್ಲ.