

Archery: ಪ್ಯಾರಿಸ್ ಒಲಿಂಪಿಕ್ಸ್ 2024 ರ ವೇಳಾ ಪಟ್ಟಿಯು ಜಾರಿಗೊಂಡಿದ್ದು, ಈಗಾಗಲೇ ಜುಲೈ 26 ರಂದು ಪ್ಯಾರಿಸ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭವು ಅಧಿಕೃತವಾಗಿ ಚಾಲನೆಗೊಂಡಿದೆ.


200 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸುಮಾರು 10,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅದರಲ್ಲಿ ಭಾರತದ ಕ್ರೀಡೆಗಳಾದ ಬಾಕ್ಸಿಂಗ್, ಕುಸ್ತಿ, ಬಾಡ್ಮಿಂಟನ್, ಜಾವೆಲಿಂಗ್, ಆರ್ಚೆರಿ, ಶೂಟಿಂಗ್, ಹಾಕಿ ಮೊದಲಾದ ಕ್ರೀಡೆಗಳು ನಡೆಯಲಿದ್ದು, ಭಾರತದ ಕೀಡಾ ಪಟುಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ; https://uplustv.com/2024/07/28/myroltadka-ಲೈನ್-ಮ್ಯಾನ್-ಕಾರ್ಯಕ್ಕೆ-ಭೇಷ್-ಎಂದ-ಜನ
ಆರ್ಚೆರಿ ಕ್ರೀಡೆ:
ಆರ್ಚೆರಿ ಕ್ರೀಡೆಯು ಜುಲೈ 25 ರಿಂದ ಆಗಸ್ಟ್ 4 ರವರೆಗೆ ನಡೆಯಲಿದೆ. ಆರ್ಚೆರಿ ಕ್ರೀಡೆಯಲ್ಲಿ ಪುರುಷರ ವಿಭಾಗ ಧೀರಜ್ ಬೊಮ್ಮದೇವರ, ತರುಣದೀಪ್ ರೈ, ಪ್ರವೀಣ್ ಜಾಧವ್, ಭಜನ್ ಕೌರ್ ಹಾಗೂ ಮಹಿಳೆಯರ ತಂಡ ದೀಪಿಕಾ ಕುಮಾರಿ, ಅಂಕಿತ ಭಕತ್ ಆಡಲಿದ್ದಾರೆ.

ಆರ್ಚೆರಿ ಕ್ರೀಡೆಯ ನಿಯಮಗಳು:
ಪ್ಯಾರಿಸ್ ಒಲಿಂಪಿಕ್‌ನ ಉದ್ಘಾಟನಾ ಸಮಾರಂಭದ ಮೊದಲೇ ಆರ್ಚರಿ ಶ್ರೇಯಾಂಕ ನಡೆದಿದೆ. ಭಾರತದ ವನಿತೆಯರು ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಅರ್ಚರಿಗೆ ಕನ್ನಡದಲ್ಲಿ ಬಿಲ್ಲುಬಾಣ ಎಂದು ಕರೆಯಲಾಗುತ್ತಿದ್ದು, ಈ ಪ್ರಕಾರ ಬಿಲ್ಲು ಮತ್ತು ಬಾಣವನ್ನು ಹಿಡಿದು ಗೇಮ್ ಆಡಲಾಗುತ್ತದೆ. ಹಾಗಾದರೆ ಅಂತರಾಷ್ಟ್ರಿಯ ಮಟ್ಟದ ಬಿಲ್ಲುಗಾರಿಕೆಯ ನಿಯಮಗಳನ್ನು ನೋಡುವುದಾದರೆ.. ಒಲಂಪಿಕ್ ಆರಂಭಿಕದ ಶ್ರೇಯಾಂಕ ಸುತ್ತನ್ನು ಆಡಿಸಲಾಗುತ್ತದೆ.

ಕ್ರೀಡಾ ಪಟುಗಳಿಗೆ 12 ಸುತ್ತುಗಳಿದ್ದು, 72 ಬಾಣಗಳನ್ನು ಹೊಡೆಯುವ ಅವಕಾಶಗಳಿರುತ್ತದೆ. ಪ್ರತಿ ಬಿಲ್ಲುಗಾರರು ತಲಾ 36ರಂತೆ ಎರಡು ಹಂತದಲ್ಲಿ ಬಾಣಗಳನ್ನು ಹೊಡೆಯಬೇಕಾಗುತ್ತದೆ. ಒಟ್ಟಾಗಿ 6 ಸೆಟ್‌ಗಳಿದ್ದು, 36 ಬಾರಿ ಬಾಣಗಳನ್ನು ಹೊಡೆಯಲಾಗುತ್ತದೆ. ಕೊನೆಯದಾಗಿ 12 ಹಂತಗಳಲ್ಲಿ 72 ಬಾಣಗಳನ್ನು ಹೊಡೆಯುವ ಮೂಲಕ ಆಟದ ಶ್ರೇಯಾಂಕವನ್ನು ನಿರ್ಧರಿಸಲಾಗುತ್ತದೆ.
ಶ್ರೇಯಾಂಕ ಸುತ್ತಿನ ತಂಡಗಳ ಅಂಕ ಪಟ್ಟಿಯಲ್ಲಿ ನಾಲ್ಕು ಸ್ಥಾನ ಪಡೆಯುವವರು ನೇರವಾಗಿ ಕ್ವಾಟ್ರ್ ಫೈನಲ್‌ಗೆ ಪ್ರವೇಶವನ್ನು ಪಡೆಯುತ್ತಾರೆ. ಉಳಿದಂತೆ 5ರಿಂದ 12ನೆ ಸ್ಥಾನ ಪಡೆಯುವವರು ರೌಂಡ್ ಆಫ್ ಆಗಿ 16 ಸುತ್ತಿನಲ್ಲಿ ಆಡಬೇಕಾಗುತ್ತದೆ.

ಅಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡವು ಕ್ವಾರ್ಟರ್ ಫೈನಲ್‌ಗೆ ಪ್ರವೇಶವನ್ನು ಪಡೆಯುತ್ತಾರೆ. ತದನಂತರ ನಾಕ್ ಔಟ್ ಹಂತದಲ್ಲಿ ತಮ್ಮ ಎದುರಾಳಿಯ ಜೊತೆ ಆಡಿ ಹೆಚ್ಚಿನ ಸ್ಕೋರ್‌ಗಳಿಸಬೇಕು, ಹೆಚ್ಚು ಅಂಕ ಗಳಿಸುವ ತಂಡ ಆಯಾ ಸುತ್ತಿನ ಗೆಲುವನ್ನು ಸಾಧಿಸುತ್ತಾರೆ.

ಅಂಕಗಳನ್ನು ನೀಡುವುದು ಹೇಗೆ?:
ಬಿಲ್ಲುಗಾರನು ಬಾಣವನ್ನು ಹೊಡೆಯುವಾಗ ಎದುರಿಗಿರುವ ಬಾಣಕ್ಕೆ ಹೊಡೆಯಬೇಕು. ಅದರ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಗುರಿಯ ಚಿನ್ನದ ರಿಂಗ್‌ನ ಒಳಗೆ ಹೊಡೆದರೆ 10 ಅಂಕಗಳನ್ನು ನೀಡಲಾಗುವುದು. ಕನಿಷ್ಟ ಅಂಕವೆಂದರೆ 1 ಅಂಕವನ್ನು ನೀಡಲಾಗುತ್ತದೆ. ಗುರಿಯನ್ನು ತಪ್ಪಿ ಹೊರಭಾಗಕ್ಕೆ, ಅಥವಾ ಬಿಳಿ ಭಾಗಕ್ಕೆ ಹೊಡೆದರೆ 1 ಅಂಕವನ್ನು ನೀಡಲಾಗುತ್ತದೆ. ಗುರಿ ತಪ್ಪಿದ ಅಥವಾ ಬೋರ್ಡ್ನ ಹೊರ ಭಾಗಕ್ಕೆ ಬಿದ್ದಲ್ಲಿ ಅಂಕವನ್ನು ನೀಡಲಾಗುವುದಿಲ್ಲ.