Wed. Nov 20th, 2024

Badminton: ಪ್ಯಾರಿಸ್ ಒಲಂಪಿಕ್ ನಲ್ಲಿ ಭಾರತದ ಬಾಡ್ಮಿಂಟನ್‌ನ ತಂಡವನ್ನು ಮುನ್ನಡೆಸುವವರು ಯಾರು ಗೊತ್ತಾ ?

Badminton:(ಜು.28) ಪ್ಯಾರಿಸ್ ಒಲಿಂಪಿಕ್ಸ್ 2024ರ ವೇಳಾ ಪಟ್ಟಿಯು ಜಾರಿಗೊಂಡಿದ್ದು, ಈಗಾಗಲೇ ಜುಲೈ 26 ರಂದು ಪ್ಯಾರಿಸ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭವು ಅಧಿಕೃತವಾಗಿ ಚಾಲನೆಗೊಂಡಿದೆ.

ಇದನ್ನೂ ಓದಿ: https://uplustv.com/2024/07/28/bangalore-130-ಕಿ-ಮೀ-ವೇಗದಲ್ಲಿ-ಗಾಡಿ-ಓಡಿಸಿದರೇ-ಆಗಸ್ಟ್-1ರಿಂದ-ಬೀಳುತ್ತೆ

200 ಕ್ಕೂ ಹೆಚ್ಚು ರಾಷ್ಟ್ರಗಳಿಂದ ಸುಮಾರು 10,500 ಕ್ರಿಡಾಪಟುಗಳು ಭಾಗವಹಿಸಲಿದ್ದಾರೆ. ಅದರಲ್ಲಿ ಭಾರತದ ಕ್ರೀಡೆಗಳಾದ ಬಾಕ್ಸಿಂಗ್, ಕುಸ್ತಿ, ಬಾಡ್ಮಿಂಟನ್, ಜಾವೆಲಿಂಗ್, ಆರ್ಚೆರಿ, ಶೂಟಿಂಗ್, ಹಾಕಿ ಮೊದಲಾದ ಕ್ರೀಡೆಗಳು ನಡೆಯಲಿದ್ದು, ಭಾರತದ ಕೀಡಾ ಪಟುಗಳು ಭಾಗವಹಿಸಲಿದ್ದಾರೆ.

ಬಾಡ್ಮಿಂಟನ್ ಕ್ರೀಡೆಯಲ್ಲಿ ಭಾರತದ ತಂಡ:

ಈ ಬಾರಿಯ ಒಲಂಪಿಕ್‌ನಲ್ಲಿ ಬಾಡ್ಮಿಂಟನ್ ಕ್ರೀಡೆಯು ಜುಲೈ 27ರಿಂದ ಆಗಸ್ಟ್ 5 ರವರೆಗೆ ನಡೆಯಲಿದೆ. ಪುರುಷರ ವಿಭಾಗದಲ್ಲಿ ಎಚ್ ಎಸ್ ಪ್ರಣೋಯ್,


ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ, ಚಿರಾಗ್ ಶೆಟ್ಟಿ, ತಂಡವಾಗಿ ಆಡಲಿದ್ದಾರೆ. ಅಂತೆಯೇ ಮಹಿಳೆಯರ ತಂಡದಲ್ಲಿ ಪಿವಿ ಸಿಂಧು ಇಂಡಿವಿಜುವಲ್ ಆಗಿ ಆಡಲಿದ್ದಾರೆ. ಅಶ್ವಿನಿ ಪೊನ್ನಮ್ಮ ಮತ್ತು ತನಿಶಾ ಕ್ರಾಸ್ಟೊ ಒಂದೇ ತಂಡದಲ್ಲಿ ಆಡಲಿದ್ದಾರೆ.

ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಜುಲೈ 27 ರಿಂದ ಪ್ಯಾರಿಸ್ 2024 ರ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಏಳು ಸದಸ್ಯರ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ.

ಮಾಜಿ ವಿಶ್ವ ಚಾಂಪಿಯನ್ ಆಗಿರುವ ಪಿವಿ ಸಿಂಧು ಅವರು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು 10 ನೇ ಶ್ರೇಯಾಂಕವನ್ನು ಹೊಂದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತರಾದ ಎಚ್‌.ಎಸ್. ಪ್ರಣಯ್ ಮತ್ತು ಲಕ್ಷ್ಯ ಸೇನ್ ಪುರುಷರ ಇಂಡಿವಿಜುವಾಲ್ ಆಗಿ ಆಡಿ ಸವಾಲನ್ನು ಎದುರಿಸಲಿದ್ದಾರೆ.

ಎಚ್ ಎಸ್ ಪ್ರಣೋಯ್ 13 ನೇ ಶ್ರೇಯಾಂಕಿತರಾಗಿದ್ದರೆ, ಲಕ್ಷ್ಯ ಸೇನ್ ಶ್ರೇಯಾಂಕ ರಹಿತರಾಗಿದ್ದಾರೆ. ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ/ಚಿರಾಗ್ ಶೆಟ್ಟಿ ಮತ್ತು ತನಿಶಾ ಕ್ರಾಸ್ಟೊ/ಅಶ್ವಿನಿ ಪೊನ್ನಪ್ಪ ಜೋಡಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ . ಪುರುಷರ ತಂಡದ ಆಟಗಾರರಲ್ಲಿ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಮೂರನೇ ಶ್ರೇಯಾಂಕವನ್ನು ಗಳಿಸಿದ್ದು, ತನಿಶಾ ಕ್ರಾಸ್ಟೊ ಮತ್ತು ಪೊನ್ನಪ್ಪ ಶ್ರೇಯಾಂಕವನ್ನು ಗಳಿಸಿಲ್ಲ ಎನ್ನಲಾಗಿದೆ.

ಈ ಬಾರಿಯ ಪ್ಯಾರಿಸ್ ಒಲಂಪಿಕ್ ಬಾಡ್ಮಿಂಟನ್ ತಂಡದಲ್ಲಿ ಯಾರಿಗೆ ಜಯ ಅನ್ನುವುದು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *