ಮೇಷ ರಾಶಿ: ನೀವು ಇಂದು ಸ್ನೇಹಿತನನ್ನು ನಂಬಿ ಯಾರಿಗೋ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಅನ್ಯರ ಚಿಂತೆ ನಿಮಗೆ ಬೇಡ. ಬಾಕಿ ಇರುವ ಕೆಲಸದ ಬಗ್ಗೆ ಹೆಚ್ಚು ಗಮನವಿರಲಿ. ದಿನವನ್ನು ಮುಂದೆ ಹಾಕುವುದು ಬೇಡ. ಇಂದು ನಿಮ್ಮ ಕಡೆಯಿಂದ ದೊಡ್ಡ ತಪ್ಪು ಆಗದಂತೆ ನೋಡಿಕೊಳ್ಳಿ. ನಿಮ್ಮ ಸಂಗಾತಿಯನ್ನು ಹೊಸ ರೀತಿಯಲ್ಲಿ ಪ್ರೀತಿಸಲು ಇಷ್ಟಪಡುವಿರಿ.
ವೃಷಭ ರಾಶಿ: ಇಂದು ನೀವು ಏನೂ ಕೆಲಸವಿಲ್ಲದೇ ಸಮಯವನ್ನು ವ್ಯರ್ಥಮಾಡುವಿರಿ. ಆದಕಾರಣ ಹತ್ತಾರು ವಿಚಾರಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಹಣದ ಬಗ್ಗೆ ಬಹಳ ಚಿಂತಾಕ್ರಾಂತರಾಗಿದ್ದು ಅದನ್ನು ಸ್ನೇಹಿತರು ಮನಗಂಡು ಸಹಾಯ ಮಾಡುವರು.
ಮಿಥುನ ರಾಶಿ: ಇಂದು ನಿಮಗೆ ಇಷ್ಟವಾಗದವರ ಜೊತೆ ಮಾತನಾಡುವ ಸಂದರ್ಭವು ಅನಿರೀಕ್ಷಿತವಾಗಿ ಬರುವುದು. ಹದಗೆಟ್ಟ ಆರೋಗ್ಯದಲ್ಲಿ ಅಲ್ಪ ಮಟ್ಟಿನ ಚೇತರಿಗೆ ಕಾಣಿಸುವುದು. ಉದ್ಯಮಿಗಳಾಗಿರುವ ನಿಮಗೆ ಉದ್ಯಮದಲ್ಲಿ ಉಂಟಾದ ಸಣ್ಣ ಬದಲಾವಣೆಯಿಂದ ಕೆಲವು ಕೆಲಸಗಾರರು ಬಿಟ್ಟು ಹೋಗಬಹುದು.
ಕರ್ಕಾಟಕ ರಾಶಿ: ನೀವು ಇಂದು ದೂರದ ಪ್ರಯಾಣವನ್ನು ಮಾಡಲು ಸಾಧ್ಯವಾಗದು. ಯಾರ ಬಳಿ ಏನನ್ನು ಮಾತನಾಡುತ್ತಿದ್ದೇನೆ ಎಂಬ ಜ್ಞಾನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಹೊಸ ಉದ್ಯೋಗವನ್ನು ಹುಡುಕುವ ಭರದಲ್ಲಿ ಮೋಸಕ್ಕೆ ಸಿಲುಕಿಕೊಳ್ಳಬಹುದು. ಅತಿಯಾದ ಆಸೆಯಿಂದ ನಿಮ್ಮ ಸಂಪತ್ತನ್ನು ಕಳೆದುಕೊಳ್ಳಬಹುದು.
ಸಿಂಹ ರಾಶಿ: ಇನ್ನೊಬ್ಬರ ನೋವಿಗೆ ಸ್ಪಂದನೆ ಸರಿಯಾಗಿ ಇರಲಿ. ಭಯದ ವಾತಾವರಣದಲ್ಲಿ ಇಂದು ಇರಲಿದ್ದೀರಿ. ನಿಮ್ಮ ವೃತ್ತಿಯ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ನಿಮ್ಮ ವೇತನವನ್ನು ತಿಳಿದು ಆಡಿಕೊಳ್ಳಬಹುದು. ಸಾರ್ವಜನಿಕ ಸಮಾರಂಭಗಳಿಗೆ ಭಾಗವಹಿಸಲು ನೀವು ಹಿಂದೇಟು ಹಾಕಬಹುದು.
ಕನ್ಯಾ ರಾಶಿ: ನಿಮ್ಮ ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವೂ ಆಗಬಹುದು. ನಿಮ್ಮ ದಾಂಪತ್ಯದ ಪ್ರಕರಣವು ನ್ಯಾಯಾಲಯದ ಮಟ್ಟದ ವರೆಗೆ ತಲುಪಬಹುದು. ನಿಮ್ಮ ಉದ್ಯಮದ ಪೂರ್ವಾವಲೋಕನ ಮಾಡಿದರೆ ನಿಮಗೆ ಸಂತೋಷವಾಗುವುದು.
ತುಲಾ ರಾಶಿ: ನಿಮ್ಮ ಪ್ರೇಮವು ಇತರರಿಗೆ ಗ್ರಾಸವಾಗಬಹುದು. ನಿಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ನಿಮ್ಮ ಯೋಚನೆಗಳಿಗೆ ಸಂಗಾತಿಯಿಂದ ಬೆಂಬಲ ಸಿಗಬಹುದು. ಅದರ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನವೇ ಆಗಬೇಕಾದೀತು. ಉದ್ಯೋಗದಲ್ಲಿ ಭಡ್ತಿ ಸಿಗುವ ವಿಚಾರವು ನಿಮಗೆ ಸ್ನೇಹಿತರಿಂದ ತಿಳಿಯಲಿದೆ.
ವೃಶ್ಚಿಕ ರಾಶಿ: ಇಂದು ಅಪರಿಚಿತ ಕರೆಗಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ಸಂಪೂರ್ಣ ಮಾಹಿತಿಯ ಜೊತೆ ಕೆಲಸಕ್ಕೆ ಮುಂದುವರಿಯಿರಿ. ವ್ಯವಹಾರದಲ್ಲಿ ನಿಮಗೆ ತಿಳಿವಳಿಕೆ ಕೊರತೆ ಎಂದು ಗೊತ್ತಾಗಬಹುದು. ಸಂಗಾತಿಯ ಕಾರಣದಿಂದ ನಿಮಗೂ ಗೌರವ ಸಿಗಲಿದೆ. ವಿವಾಹಜೀವನದ ಚಿಂತೆ ನಿಮ್ಮನ್ನು ಕಾಡಬಹುದು.
ಧನು ರಾಶಿ: ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಚರ್ಚೆ ನಾಡೆಯುವುದು. ಅದನ್ನು ನಿಮಗೆ ಸಹಿಸಲಾಗದು. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ಹಳೆಯ ಪ್ರೇಮವು ನಿಮ್ಮನ್ನು ಕಾಡಬಹುದು. ಮಕ್ಕಳ ಒತ್ತಾಯಕ್ಕೆ ಅವರ ಜೊತೆ ವಿದೇಶಕ್ಕೆ ಹೋಗಲಿದ್ದೀರಿ. ಸಾಮಾಜಿಕ ಕಾರ್ಯವನ್ನು ಬಹಳ ಒತ್ತಡದಿಂದ ಮಾಡುವಿರಿ. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ.
ಮಕರ ರಾಶಿ: ನಿಮ್ಮ ಭವಿಷ್ಯದ ಚಿಂತೆಯಿಂದ ಇಂದು ಸರಿಯಾಗಿ ನಿದ್ರೆ ಬಾರದೇ ದಿನವಿಡೀ ಅಸ್ತವ್ಯಸ್ತವಾಗುವುದು. ಮಾನಸಿಕ ಒತ್ತಡವು ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗಲಿದೆ. ನಿಮಗೆ ಬರಬೇಕಾದ ಹಣವು ಬರಲಿದೆ. ಹಣದಿಂದ ಎಲ್ಲವೂ ಅಸಾಧ್ಯ ಎಂದು ತಿಳಿದು ಹಣದ ಮೋಹವು ಕಡಿಮೆ ಆದೀತು. ಉದ್ವೇಗದಲ್ಲಿ ಏನ್ನಾದರೂ ಹೇಳಿ ಬಿಡುವಿರಿ. ಆಪ್ತರಿಗೆ ಧನಸಹಾಯ ಮಾಡಬೇಕಾದೀತು.
ಕುಂಭ ರಾಶಿ: ಉದ್ಯಮದಲ್ಲಿ ಅನಿರೀಕ್ಷಿತ ಬದಲಾವಣೆ ತರುವಿರಿ. ನಿಮಗೆ ನಿಮ್ಮ ದಿನ ನಿತ್ಯದ ಕೆಲಸಗಳೇ ಮುಖ್ಯವಾಗಿ ಉಳಿದವು ನಗಣ್ಯವೆನಿಸೀತು. ಮೋಜಿನಲ್ಲಿ ಹಣವನ್ನು ಕಳೆದುಕೊಳ್ಳುವಿರಿ. ವೃತ್ತಿಯನ್ನು ಬದಲಿಸುವ ಆಲೋಚನೆಯನ್ನು ಮನೆಯಲ್ಲಿ ಹಂಚಿಕೊಳ್ಳುವಿರಿ. ಸಹೋದರನಿಂದ ನಿಮಗೆ ಉದ್ಯೋಗಕ್ಕೆ ಸಂಬಂಧಿಸಿದ ಸಹಾಯವಾಗಲಿದೆ.
ಮೀನ ರಾಶಿ: ಇಂದು ನಿಮ್ಮ ಮಕ್ಕಳ ಜೀವನವನ್ನು ಕಂಡು ಖೇದವಾಗುವುದು. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನೀವು ಇಂದು ನಿಯಮಕ್ಕೆ ಬದ್ಧರಾಗಿ ಕಾರ್ಯವನ್ನು ಮಾಡುವಿರಿ. ಸ್ವತಂತ್ರ ಆಲೋಚನೆಗಳು ನಿಮಗೆ ಖುಷಿ ಕೊಡುವುದು. ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹಿರಿಯರ ಚಿಂತನೆ ನಡೆಸುವಿರಿ. ಬಂಧುಗಳ ಸಹಯೋಗದಿಂದ ವಾಹನವನ್ನು ಪಡೆಯುವಿರಿ.