Wed. Nov 20th, 2024

Madhya Pradesh: ಪೋರ್ನ್ ವಿಡಿಯೋ ನೋಡಿ ಅಣ್ಣನಿಂದಲೇ ತಂಗಿಯ ಮೇಲೆ ಅ****- ಪ್ರಕರಣ ಮುಚ್ಚಿಡಲು ತಾಯಿಯ ಸಹಾಯ

ಮಧ್ಯಪ್ರದೇಶ:(ಜು.28) ಮಧ್ಯಪ್ರದೇಶದ ರಿವಾ ಜಿಲ್ಲೆಯಲ್ಲಿ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದೆ. 13 ವರ್ಷದ ಬಾಲಕನೊಬ್ಬನು ರಾತ್ರಿ ಮಲಗುವಾಗ ಮೊಬೈಲ್‌ನಲ್ಲಿ ಪೋರ್ನ್ ವಿಡಿಯೋ ನೋಡಿ, ಪಕ್ಕದಲ್ಲಿಯೇ ಮಲಗಿದ್ದ 9 ವರ್ಷದ ತಂಗಿ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: https://uplustv.com/2024/07/28/new-delhi-ಇನ್ಮುಂದೆ-ಫಾಸ್ಟ್ಯಾಗ್-ಬದಲು-gnss

ಮಗನನ್ನು ಶಿಕ್ಷಿಸುವ ಬದಲು ಪೋಷಕರು ಇದನ್ನು ಮರೆಮಾಚುವ ಕೆಲಸ ಮಾಡಿದ್ದಾರೆ. ಪೊಲೀಸರ ಮುಂದೆ ಸುಳ್ಳು ಹೇಳಿಕೆ ನೀಡಿದ್ದರು. ಏನಿದು ಘಟನೆ? ಅಂದು ಆಗಿದ್ದೇನು? ಪೊಲೀಸರ ತನಿಖೆಯಲ್ಲಿ ಸತ್ಯ ಬೆಳಕಿಗೆ ಬಂದಿದ್ದೇಗೆ? ಎಂಬುದರ ಮಾಹಿತಿ ಇಲ್ಲಿದೆ.

ರಿವಾ ಜಿಲ್ಲೆಯ ನಿವಾಸಿಯಾಗಿರುವ ಬಾಲಕ ಕಳೆದ ಒಂದು ವರ್ಷದಿಂದಲೇ ಮೊಬೈಲ್‌ನಲ್ಲಿ ಅಶ್ಲೀಲ ಸಿನಿಮಾಗಳನ್ನು ನೋಡಲು ಶುರು ಮಾಡಿದ್ದನು. ಯಾರಿಗೂ ತಿಳಿಯದಂತೆ ಅಶ್ಲೀಲ ವಿಡಿಯೋ ನೋಡುವುದು ಬಾಲಕನಿಗೆ ಚಟವಾಗಿ ಬದಲಾಗಿತ್ತು. ಜುಲೈ 24ರಂದು ತಂಗಿಯ ಮೇಲೆಯೇ ಅತ್ಯಾಚಾರಗೈದಿರುವ ಘಟನೆ ನಡೆದಿದೆ.

ಜುಲೈ 24ರಂದು ರಾತ್ರಿ ಮಲಗಿದ್ದಾಗ ಕದ್ದುಮುಚ್ಚಿ ಬಾಲಕ ಮೊಬೈಲ್‌ನಲ್ಲಿ ಅಶ್ಲೀಲ ಸಿನಿಮಾಗಳನ್ನು ನೋಡಿದ್ದಾನೆ. ನಂತರ ಪಕ್ಕದಲ್ಲಿಯೇ ಮಲಗಿದ್ದ 9 ವರ್ಷದ ತಂಗಿಯ ಬಾಯಿಯನ್ನು ಮುಚ್ಚಿ ರೇಪ್ ಮಾಡಿದ್ದಾನೆ. ತಂಗಿ ಎಲ್ಲಾ ಘಟನೆಯನ್ನು ತಂದೆಗೆ ಹೇಳುತ್ತೇನೆ ಅಂದಿದ್ದಾಳೆ.

ಇದರಿಂದ ಭಯಗೊಂಡ ಬಾಲಕ ತಂಗಿಯ ಕತ್ತು ಹಿಸುಕಿ ಕೊಲೆ ಮಾಡಲು ಮುಂದಾಗಿದ್ದಾನೆ. ಕತ್ತು ಹಿಸುಕಿದ್ದರಿಂದ ಬಾಲಕಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಬಾಲಕ ತಾಯಿ ಬಳಿ ಹೋಗಿ ಎಲ್ಲಾ ವಿಷಯ ಹೇಳಿದ್ದಾನೆ.

ತಾಯಿ ಬಂದು ನೋಡಿದಾಗ ಮಗಳ ಉಸಿರಾಟದ ಚಲನೆ ಇತ್ತು. ಮಗಳ ಜೀವ ಉಳಿಸುವ ಬದಲು ತಾಯಿ ಮಗನ ಜೊತೆ ಸೇರಿ ಮತ್ತಷ್ಟು ಜೋರಾಗಿ ಕತ್ತು ಹಿಸುಕಿ ಬಾಲಕಿಯ ಉಸಿರು ನಿಲ್ಲಿಸಿದ್ದಾರೆ.

ಈ ವಿಷಯವನ್ನು ಮರೆಮಾಚಲು ತಾಯಿ ಪೊಲೀಸರ ಮುಂದೆ ವಿಷಕಾರಿ ಹುಳು ಕಚ್ಚಿದ್ರಿಂದ ಮಗಳ ಸಾವು ಆಗಿದೆ ಎಂದು ಹೇಳಿದ್ದಾಳೆ. ಮೃತ ಬಾಲಕಿಯ ಸೋದರಿಯರು ಸಹ ಇದೇ ಹೇಳಿಕೆಯನ್ನು ನೀಡಿದ್ದರು.

ತಂದೆ-ತಾಯಿ ಹಾಗೂ ನಾಲ್ಕು ಮಕ್ಕಳು ಸೇರಿದಂತೆ ಆರು ಜನರು ಕುಟುಂಬದಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಮೂರು ಹೆಣ್ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದನು. ಘಟನೆ ನಡೆದ ದಿನದಂದು ಒಂದು ಕೋಣೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ತಾಯಿ ಜೊತೆ ಮಲಗಿದ್ರೆ, ಮತ್ತೊಂದು ರೂಮ್‌ನಲ್ಲಿ ಅಣ್ಣ ಮತ್ತು ತಂಗಿ ಮಲಗಿದ್ದರು.

ಪೊಲೀಸರಿಗೆ ಎಲ್ಲರ ಹೇಳಿಕೆಯ ಮೇಲೆ ಸಂಶಯ ಮೂಡಿದ್ದರಿಂದ ಎಲ್ಲರನ್ನು ಪ್ರತ್ಯೇಕವಾಗಿ ಖಡಕ್‌ ಆಗಿ ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದು, ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *