ಮೈರೋಳ್ತಡ್ಕ :(ಜು.28) ಬಂದಾರು ಗ್ರಾಮದ ಸಾಲ್ಮರ ಕಂಚಿನಡ್ಕ ಸಂಪರ್ಕ ರಸ್ತೆಯ ಕಜೆ ಎಂಬಲ್ಲಿ ಜುಲೈ 26 ರಂದು ವಿಪರೀತ ಗಾಳಿ ಮಳೆಯ ಪರಿಣಾಮ ವಿದ್ಯುತ್ ಕಂಬದ ವಯರ್ ಮೇಲೆ ಮರ ಬಿದ್ದು ವಿದ್ಯುತ್ ವ್ಯತ್ಯಯ ಹಾಗೂ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗಿತ್ತು.
ಇದನ್ನೂ ಓದಿ: https://uplustv.com/2024/07/28/belthangadi-ನೆರಿಯ-ಚಿಬಿದ್ರೆ-ಗ್ರಾಮದ-ನೆರೆ-ಪೀಡಿತ-ಪ್ರದೇಶಗಳಿಗೆ-ಶಾಸಕ-ಹರೀಶ್
ಇದನ್ನು ಕಲ್ಲೇರಿ ಮೆಸ್ಕಾಂ ಇಲಾಖೆಗೆ ತಿಳಿಸಲಾಯಿತು. ಇದಕ್ಕೆ ಸ್ಪಂದಿಸಿ ಜುಲೈ 27 ರಂದು ಲೈನ್ ಮ್ಯಾನ್ ಸಂದೀಪ್ ರವರು ಸ್ಥಳಕ್ಕೆ ಬಂದು ರಾತ್ರಿ 8.30ರ ತನಕ ಮಳೆ, ಕತ್ತಲು ಕವಿದ ಸಮಯದಲ್ಲೂ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಪ್ರಾಮಾಣಿಕ, ನಿಷ್ಠೆ ಯಿಂದ ಸಮಸ್ಯೆ ಸರಿಪಡಿಸಿರುವುದು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮರ ತೆರವು ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪ್ರಶಾಂತ್ ನಿರುಂಬುಡ, ಕುಶಾಲಪ್ಪ ಗೌಡ ಕೆದಿಲ, ನಾರಾಯಣ ಮುಂಡೂರು,
ಕೃಷ್ಣಪ್ಪ ಖಂಡಿಗ, ಭಾಸ್ಕರ ಕೆದಿಲ, ಶೀನಪ್ಪ ಮುರೆಪ್ಪಿನಿ, ಮೋನಪ್ಪ ಕೆದಿಲ, ಡೊಂಬಯ್ಯ ಕೆದಿಲ, ಹೇಮಂತ್ ಅಬ್ಬನೂಕ್ಕು, ಮುಕೇಶ್ ಭಟ್ ಕಜೆ, ಅಶೋಕ್ ಭಟ್ ಕಾನಿಸ್ಕ ಮೊಗ್ರ, ವೇಣುಗೋಪಾಲ್ ಭಟ್, ನಂದಿತ್, ಯೋಗೀಶ್,
ಹರೀಶ್, ಸಚಿನ್ ಬಾಂಗೇರು, ಸ್ಥಳದಲ್ಲಿದ್ದು ಸೂಕ್ತ ರೀತಿಯಲ್ಲಿ ಸಹಕಾರ ನೀಡಿದರು.