ಬೆಳ್ತಂಗಡಿ (ಜು 29) : ಕಣಿಯೂರು ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯ ಪ್ರವೀಣ್ ಗೌಡ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ನಡೆದ ದರೋಡೆ ಹಾಗೂ ಹಲ್ಲೆಯನ್ನು ಖಂಡಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ನಾಳೆ ಜುಲೈ 30 2024,ಮಂಗಳವಾರ ಬೆಳಗ್ಗೆ 10.00 ಗಂಟೆಗೆ ಶ್ರಮಿಕ ಶಾಸಕರ ಕಚೇರಿ ಬಳಿಯಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.