ಬೆಳ್ತಂಗಡಿ:(ಜು.29) ಯೆನೆಪೋಯ ಮೆಡಿಕಲ್ ಕಾಲೇಜು, ದೇರಳಕಟ್ಟೆ,ಮಂಗಳೂರು ಇದರ ರಜತ ಮಹೋತ್ಸವದ ಸಂದರ್ಭದಲ್ಲಿ ಯೋಗ ಗುರು ಕುಶಾಲಪ್ಪ ಗೌಡ ಅವರಿಂದ ನಿರಂತರ 25 ಗಂಟೆಗಳ ಮ್ಯಾರಥಾನ್ ಯೋಗ ಬೋಧನೆಯ ಸಂದರ್ಭ
ಇದನ್ನೂ ಓದಿ: https://uplustv.com/2024/07/29/nasa-ಬಾಹ್ಯಾಕಾಶದಲ್ಲಿ-ಸಿಲುಕಿಕೊಂಡಿರುವ-ಸುನಿತಾ-ವಿಲಿಯಮ್ಸ್-ಬಿಗ್-ಅಪ್ಡೇಟ್
ಉಚಿತ ಯೋಗ ತರಬೇತಿ ಪಡೆದ ಆಸಕ್ತ ಶಿಬಿರಾರ್ಥಿಗಳಿಂದ ಹಾಗೂ ದಾನಿಗಳಿಂದ ಸಂಗ್ರಹವಾದ ಒಟ್ಟು ₹.2,52,525.00/- ( ಎರಡು ಲಕ್ಷದ ಐವತ್ತೆರಡು ಸಾವಿರದ ಐನೂರ ಇಪ್ಪತ್ತೈದು) ರೂಪಾಯಿಯನ್ನು ಬೆಳ್ಳಿಹಬ್ಬದ ಶುಭಸಂದರ್ಭದಲ್ಲಿ
ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ| ಯೆನೆಪೋಯ ಅಬ್ದುಲ್ ಕುಂಞಿ ಇವರು ಯೋಗ ಗುರು ಹಾಗೂ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್(ರಿ), ಮೊಗ್ರು, ಬೆಳ್ತಂಗಡಿ ಇದರ ಸ್ಥಾಪಕ ಅಧ್ಯಕರು ಕೂಡ ಆದಂತಹ ಶ್ರೀಯುತ ಕುಶಾಲಪ್ಪ ಗೌಡ ನೆಕ್ಕರಾಜೆ ಇವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿ ಸೇವಾ ಟ್ರಸ್ಟ್ (ರಿ) ಮೊಗ್ರು,ಬೆಳ್ತಂಗಡಿ ಇದರ ಕಾರ್ಯದರ್ಶಿ ಮನೋಹರ ಗೌಡ ಅಂತರ,ಉಪಾಧ್ಯಕ್ಷ ಆನಂದ ಬಿ, ಟ್ರಸ್ಟಿ ಬಾಲಕೃಷ್ಣ ಮುಗೇರಡ್ಕ,ಸದಸ್ಯ ಗಂಗಾಧರ ಪೂಜಾರಿ,ಯೋಗ ಶಿಕ್ಷಕ ಗಿರಿಯಪ್ಪ ಎರ್ಮಳ,ಮಾಸ್ಟರ್ ಮೋನಿಶ್.ಯು .ಕೆ. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 25 ಗಂಟೆಗಳ ಮ್ಯಾರಥಾನ್ ಯೋಗ ಬೋಧನೆಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಂತಹ ವಿಶ್ವ ದಾಖಲೆ ಮಾಡಿದ
ಯೋಗ ಗುರುಗಳಾದ ಶ್ರೀಯುತ ಕುಶಾಲಪ್ಪ ಗೌಡರು ಈ ಸಾಧನೆಯಿಂದ ತನ್ನ ಸ್ವಂತಕ್ಕೆ ಯಾವುದೇ ಆರ್ಥಿಕ ಪ್ರತಿಫಲಾಪೇಕ್ಷೆ ಪಡೆಯದೇ ಸಂಗ್ರಹವಾದ ಎಲ್ಲಾ ಮೊತ್ತವನ್ನು ಗ್ರಾಮೀಣ ಮಕ್ಕಳ ಗುಣಮಟ್ಟದ ಶಿಕ್ಷಣದ ಹಿತದೃಷ್ಟಿ ಯಿಂದ
ತನ್ನೂರಿನ ಶಾಲಾಭಿವೃದ್ಧಿ ಸಮಿತಿಗೆ ವಿನಿಯೋಗಿಸಿದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು ಹಾಗೂ ಮುಂದಿನ ದಿನಗಳಲ್ಲಿ ಟ್ರಸ್ಟ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ , ಮೊಗ್ರು,ಬೆಳ್ತಂಗಡಿ ಇದರ ಅಭಿವೃದ್ಧಿಗೆ ಕಾರ್ಯಪ್ರವೃತ್ತವಾಗಲಿದೆ ಎಂದರು.