Wed. Nov 20th, 2024

Chennai: ಊಟದಲ್ಲಿ ಉಪ್ಪಿನಕಾಯಿ ಇಲ್ಲದ್ದಕ್ಕೆ ಹೋಟೆಲ್‌ ಗೆ ದಂಡ ವಿಧಿಸಿದ ಕೋರ್ಟ್‌ – ದಂಡದ ಮೊತ್ತ ಎಷ್ಟು ಗೊತ್ತಾ?

ಚೆನ್ನೈ:(ಜು.29) ಉಪ್ಪಿನಕಾಯಿ ಇಲ್ಲದಿದ್ದರೆ, ಊಟ ಸೇರೋದು ಕಷ್ಟ. ಉಪ್ಪಿನಕಾಯಿಗಾಗಿ 25 ರೂಪಾಯಿ ಬದಲಿಗೆ ಹೋಟೆಲ್​​ವೊಂದು 35000 ರೂಪಾಯಿಗಳ ದಂಡ ಕಟ್ಟುವಂತೆ ಆಗಿದೆ. ಸದ್ಯ ಏನಿದು ಉಪ್ಪಿನಕಾಯಿ ಪ್ರಕರಣದ ಸ್ಟೋರಿ??

ಇದನ್ನೂ ಓದಿ: https://uplustv.com/2024/07/29/belthangadi-ಮ್ಯಾರಥಾನ್-ಯೋಗ-ಬೋಧನೆಯಿಂದ-ರೂಪಾಯಿ-252525-ದೇಣಿಗೆ

ಪುಣ್ಯತಿಥಿ ಕಾರ್ಯಕ್ರಮದ ಊಟದಲ್ಲಿ ಉಪ್ಪಿನಕಾಯಿ ಇಲ್ಲದಿದ್ದಕ್ಕೆ 35 ಸಾವಿರ ರೂಪಾಯಿ ದಂಡ ಕಟ್ಟುವಂತೆ ಬಾಲಮುರುಗನ್ ಹೋಟೆಲ್ ಮಾಲೀಕರಿಗೆ ತಮಿಳುನಾಡಿನ ವಿಲ್ಲುಪುರಂನ ಗ್ರಾಹಕರ ಕೋರ್ಟ್​ ಆದೇಶ ನೀಡಿದೆ.

ಸಿ ಆರೋಕಿಯಾಸಾಮಿ ಎನ್ನುವರು 2022ರ ನವೆಂಬರ್​ನಲ್ಲಿ ತನ್ನ ಸಂಬಂಧಿಯೊಬ್ಬರ ಮೊದಲ ವರ್ಷದ ಪುಣ್ಯತಿಥಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗುವ 25 ಜನರಿಗೆ ಬಾಲಮುರುಗನ್ ಹೋಟೆಲ್​ನಿಂದ ಪ್ರತಿ ಊಟಕ್ಕೆ 80 ರೂಪಾಯಿಯಂತೆ ಫುಡ್ ತರಿಸಿಕೊಂಡಿದ್ದರು.

ಇದಕ್ಕೆ 2000 ರೂ.ಗಳನ್ನು ಹೋಟೆಲ್​ಗೆ ಪಾವತಿ ಮಾಡಬೇಕಾಗಿತ್ತು. ಆದರೆ ಈ ಊಟದ ಸಮಯದಲ್ಲಿ ಉಪ್ಪಿನಕಾಯಿ ತಂದಿರಲಿಲ್ಲ ಎಂದು ಈ ಬಗ್ಗೆ ಹೋಟೆಲ್​ನವರಿಗೆ ತಿಳಿಸಿದ್ದಾರೆ. ಇದಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ಕಾರ್ಯಕ್ರಮಕ್ಕೆ ಉಪ್ಪಿನಕಾಯಿ ತರಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಎಲ್ಲರ ಊಟ ಮುಗಿದು ಹೋಗಿತ್ತು ಎಂದು ಹೇಳಲಾಗಿದೆ.

ಹೀಗಾಗಿ ಉಪ್ಪಿನಕಾಯಿ ವಾಪಸ್ ತೆಗೆದುಕೊಂಡು ಹೋಗುವಂತೆ ಸಿ ಆರೋಕಿಯಾಸಾಮಿ ತಿಳಿಸಿದ್ದಾರೆ. ಆದರೆ ಇಲ್ಲ, ಅದನ್ನು ತಂದಿದ್ದರಿಂದ ನೀವು ಹಣ ಪಾವತಿ ಮಾಡಬೇಕೆಂದು ಹೇಳಿದಾಗ ಹೋಟೆಲ್​ ಮಾಲೀಕರ ಹಾಗೂ ಗ್ರಾಹಕನ ನಡುವೆ ವಾದ-ವಿವಾದ ನಡೆದು ಕೇಸ್​ ಕೋರ್ಟ್​ ಮೆಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ಮಾಡಿದ ತಮಿಳುನಾಡಿನ ವಿಲ್ಲುಪುರಂನ ಗ್ರಾಹಕರ ನ್ಯಾಯಾಲಯ ಹೋಟೆಲ್​ಗೆ ದಂಡ ವಿಧಿಸಿದೆ.

ಹೋಟೆಲ್​ ಸೇವೆಯಲ್ಲಿ ಕೊರತೆಯಾಗಿದೆ. ಇದು ಗ್ರಾಹಕರಿಗೆ ದೈಹಿಕ ತೊಂದರೆ ಮತ್ತು ಮಾನಸಿಕ ಸಂಕಟ ಉಂಟುಮಾಡಿದೆ. ಹೀಗಾಗಿ ಹೋಟೆಲ್​ನವರು 5,000 ರೂಪಾಯಿಗಳ ಕೋರ್ಟ್​ನ ವ್ಯಾಜ್ಯ ವೆಚ್ಚ ಹಾಗೂ 30,000 ರೂಪಾಯಿ ದಂಡ ಗ್ರಾಹಕರಿಗೆ ನೀಡಬೇಕೆಂದು ಆದೇಶ ನೀಡಿದೆ. ಇನ್ನು ಆರ್ಡರ್ ಮಾಡಿದ ಊಟದಲ್ಲಿ ಬಿಳಿ ಅನ್ನ, ಸಾಂಬಾರ್, ಖಾರ ಕುಜಂಬು, ರಸಂ, ಮಜ್ಜಿಗೆ, ಕೂಟ್ಟು, ಪೊರಿಯಾಲ್, ಅಪ್ಪಳಂ, ದೊಡ್ಡ ಗಾತ್ರದ ಬಾಳೆ ಎಲೆಗಳು ಇದ್ದವು. ಆದರೆ ಇದರಲ್ಲಿ ಉಪ್ಪಿನ ಕಾಯಿ ಇಲ್ಲದಿದ್ದೇ ಕೋರ್ಟ್​ಗೆ ಹೋಗುವಂತೆ ಮಾಡಿದೆ.

Leave a Reply

Your email address will not be published. Required fields are marked *