Wed. Nov 20th, 2024

NASA: ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ – ಬಿಗ್​ ಅಪ್​ಡೇಟ್ ಕೊಟ್ಟ NASA

NASA:(ಜು.29) ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಆಗಲು ದಾರಿ ಮುಕ್ತವಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ಸುನಿತಾ ವಿಲಿಯಮ್ಸ್ ವಾಪಸಾತಿಗೆ ಸಂಬಂಧಿಸಿ ಅಪ್‌ಡೇಟ್ ನೀಡುತ್ತಿರುವ NASA ಇದೀಗ ಖುಷಿಯ ಸುದ್ದಿಯನ್ನ ನೀಡಿದೆ.

ಇದನ್ನೂ ಓದಿ: https://uplustv.com/2024/07/29/bengaluru-ಬೆಳಗ್ಗೆ-ಮದುವೆ-ಪ್ರಸ್ತಾಪ-ಸಂಜೆ-ವೇಳೆಗೆ-ಮಗಳೇ-ಇಲ್ಲ

ಬೋಯಿಂಗ್​ನ ಸ್ಟಾರ್​ಲೈನ್ ಬಾಹ್ಯಾಕಾಶ ನೌಕೆ ಶೀಘ್ರದಲ್ಲೇ ವಾಪಸ್ ಆಗಲು ಹಾರಾಟ ನಡೆಸಲಿದೆ. ಸಂಕಷ್ಟಕ್ಕೆ ಸಿಲುಕಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಆರ್​ಸಿಆರ್​ ಪರೀಕ್ಷೆಯು ಯಶಸ್ವಿಯಾಗಿದೆ. ಇಬ್ಬರು ಸರಿಯಾಗಿಯೇ ರೆಸ್ಪಾನ್ಸ್ ಮಾಡಿದ್ದಾರೆ. ಇದೇ ವೇಳೆ ಬಾಹ್ಯಾಕಾಶ ನೌಕೆಗೆ ಸಂಬಂಧಿಸಿ ಕೆಲವು ಪರೀಕ್ಷೆಗಳನ್ನು ಮಾಡಲಾಯಿತು. ಅದು ಕೂಡ ಯಶಸ್ವಿಯಾಗಿದೆ ಎಂದು ನಾಸಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫ್ಲೈಟ್ ಡೈರೆಕ್ಟರ್ ಕೋಲ್ ಮಹ್ರಿಂಗ್ ಮಾರ್ಗದರ್ಶನದಲ್ಲಿ ಬಾಹ್ಯಾಕಾಶ ನೌಕೆಯ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗಳೆಲ್ಲ ಸಕಾರಾತ್ಮಕವಾಗಿವೆ. ಸ್ಟಾರ್ ಲೈನರ್ ಮತ್ತು ಐಎಸ್​ಎಸ್ ತಂಡ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಪರೀಕ್ಷೆ ವೇಳೆ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ Boeing’s CST-100ನಲ್ಲಿ ಇದ್ದಾರೆ.

ಇವರು ಸರಿಯಾದ ಸಮಯಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಾಪಸ್ ಆಗುವ ಇವರು ಇನ್ನೂ ಎರಡು ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ. ಆ ಪರೀಕ್ಷೆಯು ಮುಂದಿನ ವಾರ ನಡೆಯಲಿದೆ. ನಂತರ ಸುರಕ್ಷಿತ ಲ್ಯಾಂಡಿಂಗ್ ಬಗ್ಗೆ ನಿರ್ಧಾರ ಮಾಡಲಾಗುವುದು. ಗಗನಯಾನಿಗಳು ಶೀಘ್ರದಲ್ಲೇ ಮರಳುವ ಭರವಸೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿಗಳ ಪ್ರಕಾರ, ಮುಂದಿನ ವಾರ ನಡೆಯಲಿರುವ ಹಾರಾಟದ ಪರೀಕ್ಷಾ ಸಿದ್ಧತೆಯೂ ಪೂರ್ಣಗೊಂಡಿದೆ. ಹಾಟ್​ ಫೈರ್​ ಟೆಸ್ಟ್​ನ ಡೇಟಾವನ್ನೂ ಪರಿಶೀಲನೆ ಮಾಡಲಾಗಿದೆ. ಆದರೆ ಅವರು ವಾಪಸ್ ಆಗುವ ದಿನಾಂಕವನ್ನು ಇನ್ನೂ ಪ್ರಕಟವಾಗಿಲ್ಲ. ಆಗಸ್ಟ್​ನಲ್ಲಿ ಸುನಿತಾ ವಿಲಿಯಮ್ಸ್​ ಭೂಮಿಗೆ ಮರಳಲಿದ್ದಾರೆ.

ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6 ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. 5 ಥ್ರಸ್ಟರ್‌ಗಳಲ್ಲಿ ದೋಷ ಕಂಡುಬಂದಿದೆ.

ಆದರೆ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಅವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ.

Leave a Reply

Your email address will not be published. Required fields are marked *