Wed. Nov 20th, 2024

Mangalore: ಬೀದಿ ಬದಿ ವ್ಯಾಪಾರಿಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ

ಮಂಗಳೂರು:(ಜು.30) ಬೀದಿ ಬದಿ ವ್ಯಾಪಾರಿಗಳ ಮೇಲೆ ಮಂಗಳೂರು ಮಹಾನಗರಪಾಲಿಕೆ ಟೈಗರ್ ಕಾರ್ಯಾಚರಣೆ ಆರಂಭಿಸಿದೆ.

ಇದನ್ನೂ ಓದಿ: ಕೇರಳ: ವಯನಾಡಿನಲ್ಲಿ ಭಾರೀ ಭೂಕುಸಿತ: ಹಲವರು ಸಿಕ್ಕಿ ಹಾಕಿಕೊಂಡಿರುವ ಶಂಕೆ

ಲೇಡಿಹಿಲ್‌ನ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆವರೆಗೆ ಹಾಗೂ ಕೆಪಿಟಿಯಿಂದ ಯೆಯ್ಯಾಡಿವರೆಗೆ ರಸ್ತೆ ಬದಿಯಲ್ಲಿ ಗೂಡಂಗಡಿಗಳನ್ನುಇಂದು ತೆರವುಗೊಳಿಸಲಾಯಿತು.

ಈ ವೇಳೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಅವರ ಸಂಘಟನೆಯ ಮುಖಂಡರು ಭಾರಿ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿ ಪ್ರತಿರೋಧ ಒಡ್ಡಿದರು. ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಟೈಗರ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈ ವೇಳೆ ಅಂಗಡಿಗಳನ್ನು ಬುಲ್‌ಡೋಜರ್‌ಗಳ ಮೂಲಕ ಗೂಡಂಗಡಿಗಳನ್ನು ಧ್ವಂಸಗೊಳಿಸಿದೆ.

ಅದರಲ್ಲಿದ್ದ ಮಾರಾಟ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಂಗಡಿಯನ್ನು ಹಾನಿಗೊಳಿಸದಂತೆ ವ್ಯಾಪಾರಿಗಳು ಗೋಳಿಟ್ಟರೂ ಅಧಿಕಾರಿಗಳು ಕಿವಿಗೊಡಲಿಲ್ಲ.

Leave a Reply

Your email address will not be published. Required fields are marked *