ಪುತ್ತೂರು:(ಜು.30) ಮಾಣಿ-ಮೈಸೂರು ಹೆದ್ದಾರಿಯ ಪುತ್ತೂರು – ಸುಳ್ಯ ರಸ್ತೆಯ ಶೇಖಮಲೆ ಎಂಬಲ್ಲಿ ಬಳಿ ಗುಡ್ಡ ಕುಸಿತ ಸಂಭವಿಸಿದೆ.
ಇದನ್ನೂ ಓದಿ: 🌊ಕಲ್ಮಂಜ: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ನೇತ್ರಾವತಿ ಹಾಗೂ ಮೃತ್ಯುಂಜಯ ನದಿ ಸಂಗಮ
ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಗುಡ್ಡ ಕುಸಿತದಿಂದಾಗಿ ಈಗಾಗಲೇ 4 ವಿದ್ಯುತ್ ಕಂಬಗಳು ನೆಲಕ್ಕುರುಳಿದೆ.
ಗುಡ್ಡ ಕುಸಿತ ಮುಂದುವರಿದಿದ್ದು, 2 ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಸಂಬಂಧಪಟ್ಟವರ ಕಾರ್ಯಾಚರಣೆಗೆ ಪ್ರಯಾಣಿಕರು ಕಾಯುತ್ತಿದ್ದಾರೆ.
ಸದ್ಯ ಪುತ್ತೂರು – ಸುಳ್ಯ ರಸ್ತೆ ಸಂಚಾರ ಬಂದ್ ಆಗಿದೆ ಎಂದು ತಿಳಿದುಬಂದಿದೆ.