ಮಂಗಳೂರು:(ಜು.31) ಮಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರೆದಿದೆ. ರಸ್ತೆಯಲ್ಲೇ ಮಳೆ ನೀರು ತುಂಬಿ ಹರಿಯುತ್ತಿದೆ.

ಇದನ್ನೂ ಓದಿ:🛑ಮಂಗಳೂರು: ಮಂಗಳೂರಿನಲ್ಲಿ ಮತ್ತೆ ಅಂಡರ್ ವರ್ಲ್ಡ್ ಸದ್ದು – ಡಾನ್ ಕಲಿಯೋಗಿಶ್ ಸಹಚರರು ಅರೆಸ್ಟ್!!

ಇಲ್ಲೊಬ್ಬ ಕೆಎಸ್ ಆರ್ ಟಿಸಿ ಬಸ್ ಚಾಲಕ ಮಳೆ ನೀರಿನಲ್ಲೇ ಬಸ್ ಚಲಾಯಿಸಿ ಎಡವಟ್ಟು ಮಾಡಿಕೊಂಡ ಘಟನೆ ಮಂಗಳೂರಿನ ಪಡೀಲ್ ರೈಲ್ವೇ ಅಂಡರ್ ಪಾಸ್ ನಲ್ಲಿ ನಡೆದಿದೆ.


ಏನಿದು ಘಟನೆ?
ಮಂಗಳೂರಿನ ಪಡೀಲ್ ರೈಲ್ವೇ ಅಂಡರ್ ಪಾಸ್ ನಲ್ಲಿ ಮಳೆ ನೀರು ತುಂಬಿದೆ. ಹೀಗಿರುವಾಗ ಕೆಎಸ್ ಆರ್ ಟಿಸಿ ಬಸ್ ಚಾಲಕನೋರ್ವ ಮಳೆ ನೀರಿನಲ್ಲೇ ಬಸ್ ಚಲಾಯಿಸಿ ರಸ್ತೆ ದಾಟಲು ಯತ್ನಿಸಿದ್ದಾನೆ.


ಆದರೆ ನೀರಿನಲ್ಲಿ ಮುಂದೆ ಸಾಗಲಾರದೆ ಕೆಎಸ್ ಆರ್ ಟಿಸಿ ಬಸ್ ಜಖಂಗೊಂಡಿದೆ. ಬಸ್ಸಿನೊಳಗೆ ನೀರು ನುಗ್ಗಿ ತಾಂತ್ರಿಕ ದೋಷದಿಂದ ಬಸ್ ಮಧ್ಯೆದಲ್ಲೇ ಬಾಕಿಯಾಗಿದೆ.


ಬಸ್ ನೊಳಗಿದ್ದ ಪ್ರಯಾಣಿಕರು ಇಳಿಯಲಾಗದೆ ಬಸ್ ನಲ್ಲೇ ಪರದಾಡಿದ ಘಟನೆ ನಡೆದಿದೆ.

ಮಂಗಳೂರು ನಗರದಿಂದ ಪಡೀಲ್, ಬಜಾಲ್, ಜಲ್ಲಿಗುಡ್ಡೆ ಪ್ರದೇಶಕ್ಕೆ ತೆರಳುವ ಬಸ್ ಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತದೆ.