ಉಳ್ಳಾಲ:(ಜು.31) ನೇತ್ರಾವತಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಪಾವೂರು ಗ್ರಾಮದ ಕಡವಿನಬಳಿಯ ಹರೇಕಳ,


ಪರಾರಿದೋಟ ಭಾಗದಲ್ಲಿ ಮುಳುಗಡೆಯಾದ 15 ಮನೆಮಂದಿಯನ್ನು ಎನ್ ಡಿಆರ್ ಎಫ್, ಅಗ್ನಿ ಶಾಮಕ ದಳ ನೇತೃತ್ವದಲ್ಲಿ ಸ್ಥಳಾಂತರಿಸಲಾಗಿದೆ.


ಇದನ್ನೂ ಓದಿ;🛑ವಯನಾಡು ದುರಂತ : ಚೀರಾಡಿ ಕುಟುಂಬವನ್ನು ಕಾಪಾಡಿದ ಹಸು !!




ಕಡೆಂಜದೋಟ, ಬೈತಾರು, ಉಳಿದೊಟ್ಟು ಭಾಗದಲ್ಲಿ ನದಿ ತೀರದ ಪ್ರದೇಶದಲ್ಲಿ ನೀರು ಏರಿಕೆಯಾಗುತ್ತಲೇ ಇದೆ. ಸಂಜೆ ವೇಳೆ ಮನೆಯೊಳಗೆ ನೀರು ನುಗ್ಗಿದ ಪರಿಣಾಮವಾಗಿ ಕಾರ್ಯಪ್ರವೃತ್ತರಾದ ರಕ್ಷಣಾ ತಂಡಗಳು ಮನೆಯಲ್ಲಿದ್ದ 30 ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿದೆ.
