ಬೆಳ್ತಂಗಡಿ:(ಆ.1) ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ, ಎಲ್ಲರೂ ಎಚ್ಚರಿಕೆಯಿಂದ ಇರುವಂತೆ ತಾಲೂಕಿನ ಜನತೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮನವಿ ಮಾಡಿದ್ದಾರೆ.
ಇದನ್ನೂ ಓದಿ: 🔺 Daily Horoscope- ಇಂದು ಈ ರಾಶಿಯವರು ವಿದ್ಯುತ್ ಉಪಕರಣದಿಂದ ಜಾಗರೂಕರಾಗಿರುವುದು ಅವಶ್ಯಕ!
ಜಿಲ್ಲೆಯ ಎಲ್ಲಾ ಜೀವ ನದಿಗಳು ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿಯೂ ಭೂಕುಸಿತ ಹಾಗೂ ಮರಗಳು ರಸ್ತೆಗೆ ಉರುಳುತ್ತಿರುವ ಘಟನೆಗಳು ಈಗಾಗಲೇ ನಿಮ್ಮೆಲ್ಲರ ಗಮನಕ್ಕೂ ಬಂದಿರುತ್ತದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರು ಅಗತ್ಯ ಸಂಚಾರ ನಡೆಸುವ ಸಂದರ್ಭ ಅತ್ಯಂತ ಹೆಚ್ಚಿನ ಕಾಳಜಿಯನ್ನು ವಹಿಸುವಂತೆ ವಿನಂತಿಸುತ್ತ, ನಮ್ಮ ಬೆಳ್ತಂಗಡಿ ತಾಲೂಕಿನಲ್ಲಿ ನದಿ ಪಾತ್ರಗಳಲ್ಲಿ ವಾಸಿಸುತ್ತಿರುವ ಎಲ್ಲಾ ಜನರು ಕೂಡ ತಮ್ಮ ರಕ್ಷಣೆ ಹಾಗೂ ಜಾನುವಾರುಗಳ ರಕ್ಷಣೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡು,
ಯಾವುದೇ ರೀತಿಯ ಅಪಾಯದ ಮುನ್ಸೂಚನೆ ದೊರೆತ ತಕ್ಷಣ ನಮ್ಮ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹಾಗೂ ‘ ಶ್ರಮಿಕ ‘ ತಂಡ ನಿಮ್ಮ ಸಹಾಯಕ್ಕೆ ಸನ್ನದ್ಧವಾಗಿದ್ದು ಈ ಕೆಳಗೆ ನೀಡಲಾದ ತುರ್ತು ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು.
ಹಗಲು ರಾತ್ರಿಯೆನ್ನದೆ ಯಾವುದೇ ಸಮಯದಲ್ಲಾದರೂ, ನಿಮ್ಮ ಸಹಾಯಕ್ಕೆ ನಮ್ಮ ತಂಡ ಸದಾ ಸಿದ್ಧವಾಗಿದೆ ಎಂದು ಹರೀಶ್ ಪೂಂಜಾ ಜನತೆಗೆ ಹೇಳಿದ್ದಾರೆ.