ಬೆಳ್ತಂಗಡಿ:(ಆ.1) ಬೆಳ್ತಂಗಡಿ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: 🛑Wayanad landslide: ಏರುತ್ತಲೇ ಇದೆ ಶವಗಳ ಲೆಕ್ಕ- ಕಣ್ಣೀರು ತರಿಸುವಂತಿದೆ ಕೇರಳದ ಘೋರ ದೃಶ್ಯ
ಮದ್ದಡ್ಕ, ಗುರುವಾಯನಕೆರೆ ಹಿ.ಪ್ರಾ ಶಾಲೆ, ಬಂಟರ ಭವನ, ಗುರುವಾಯನಕೆರೆ ಮಸೀದಿ, ಮೇಲಂತಬೆಟ್ಟು, ಅಳದಂಗಡಿ, ಸವಣಾಲು, ಮೊದಲಾದ ಕಡೆಗಳಿಗೆ ಭೇಟಿ ನೀಡಿ, ಮನೆ ಹಾನಿ, ಗುಡ್ಡ ಕುಸಿತ , ಮಳೆ ಹಾನಿ ಸಮಸ್ಯೆಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.