Tue. Mar 25th, 2025

Bengaluru India Nano 2024 : ನಾಳೆ ‘ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ’ ಉದ್ಘಾಟನೆ

ಬೆಂಗಳೂರು :(ಆ.1) ಆಗಸ್ಟ್ 1 ರಿಂದ 3ರ ವರೆಗೆ 13ನೇ ಆವೃತ್ತಿಯ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ ನಡೆಸುತ್ತಿದ್ದು, ಇದರ ಉದ್ಘಾಟನಾ ಸಮಾರಂಭ ನಾಳೆ ನಡೆಯಲಿದೆ.

ಇದನ್ನೂ ಓದಿ: 🛑ಜಾರ್ಖಂಡ್‌: 3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಹಾವಾಗಿ ಗುಹೆಯಲ್ಲಿ ಪತ್ತೆ- ಈಕೆ ರಹಸ್ಯವೇನು?

ಬೆಂಗಳೂರಿನಲ್ಲಿ 13ನೇ ಆವೃತ್ತಿಯ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನ – 2024 ನಡೆಯಲಿದೆ. ಸುಸ್ಥಿರತೆಗಾಗಿ ನ್ಯಾನೊ ತಂತ್ರಜ್ಞಾನ; ಹವಾಮಾನ, ಇಂಧನ ಮತ್ತು ಆರೋಗ್ಯ ರಕ್ಷಣೆ ಎಂಬುದು ಈ ಸಮಾವೇಶದ ಘೋಷವಾಕ್ಯವಾಗಿದೆ.

ನ್ಯಾನೋ ಸಮ್ಮೇಳನದಲ್ಲಿ 6ಕ್ಕೂ ಹೆಚ್ಚು ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ದೇಶಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಹಾಗೂ 50ಕ್ಕೂ ಹೆಚ್ಚು ಸಂಸ್ಥೆಗಳು ಪ್ರದರ್ಶನ ನೀಡಲಿದೆ.

ರಾಜ್ಯದಲ್ಲಿ ಕೈಗಾರಿಕೆ, ಶೈಕ್ಷಣಿಕ ಮತ್ತು ಸಂಶೋಧಕರಿಗೆ ಜ್ಞಾನ ವಿನಿಮಯಕ್ಕೆ ಜಾಗತಿಕ ವೇದಿಕೆಯಾಗುವ ನಿಟ್ಟಿನಲ್ಲಿ ಹಾಗೂ ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನ ಕ್ಷೇತ್ರದ ಕೈಗಾರಿಕೆಗಳ ಅಭಿವೃದ್ಧಿಗೆ ನೆರವಾಗುವ ಪರಿಸರವನ್ನು ಸೃಷ್ಠಿಸುವ ಉದ್ದೇಶದೊಂದಿಗೆ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನವನ್ನು ಆಯೋಜಿಸಲಾಗಿದೆ.

Leave a Reply

Your email address will not be published. Required fields are marked *