ಜಾರ್ಖಂಡ್:(ಆ.1) ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಗುಹೆಯೊಂದರಲ್ಲಿ ಪತ್ತೆಯಾಗಿದ್ದು, ಗುಹೆಯೊಳಗೆ ಆಕೆಯ ಸರ್ಪದಂತಹ ವರ್ತನೆ ಕಂಡು ಕುಟುಂಬಸ್ಥರು, ಊರವರು ಬೆಚ್ಚಿಬಿದ್ದಿದ್ದಾರೆ.
ಜಾರ್ಖಂಡ್‌ನ ಗರ್ವಾ ಜಿಲ್ಲೆಯ ಕರಿವಾಡಿ ಗ್ರಾಮದ ರಾಣಿದಿಹ್ ಗುಪ್ತಾ ಗುಹೆಯಲ್ಲಿ ನಡೆದಿದೆ.
ಇದನ್ನೂ ಓದಿ: 🔶ಉಜಿರೆ: ಶ್ರೀ ಧ.ಮಂ.ಸ್ವಾ.ಮಹಾವಿದ್ಯಾಲಯ ಉಜಿರೆ ಹಿರಿಯ ವಿದ್ಯಾರ್ಥಿ ಸಂಘ(ರಿ.) ದಿಂದ “SDM ನೆನಪಿನಂಗಳ”
ಯುವತಿಯೊಬ್ಬರು 3 ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಕುಟುಂಬಸ್ಥರೆಲ್ಲಾ ಆಕೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರಂತೆ. ಆದರೆ ಎಲ್ಲೂ ಸಿಕ್ಕಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೇ ಗ್ರಾಮದ ರಾಣಿದಿಹ್ ಗುಪ್ತಾ ಗುಹೆಯಲ್ಲಿ ಯುವತಿ ಕಾಣಿಸಿಕೊಂಡಿದ್ದಾರೆ.
ಗುಹೆಯೊಳಗಿಂದ ಆಕೆ ಹಾವಿನಂತೆ ವರ್ತಿಸುತ್ತಿರುವುದನ್ನು ಜನರು ಕಂಡಿದ್ದಾರೆ. ನೆಲದ ಮೇಲೆ ತೆವಳುತ್ತಿದ್ದಾಳೆ. ಜೊತೆಗೆ ಹಾವಿನ ಹಾಗೆ ನಾಲಿಗೆಯನ್ನು ಹೊರ ತೆಗೆದು ತೋರಿಸುತ್ತಿದ್ದಾಳೆ. ಇದನ್ನು ಕಂಡ ಜನರು ಆಕೆಯನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಆಕೆಯ ಕುಟುಂಬಸ್ಥರು ಧಾವಿಸಿದ್ದು, ಮಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ನಂತರ ಮಗಳಿಗೆ ವಿಶೇಷ ಪೂಜೆ ಮಾಡಿ ಗುಹೆಯಿಂದ ಹೊರ ಕರೆದುಕೊಂಡು ಹೋಗಿದ್ದಾರೆ. ಈ ಕುರಿತ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ವಿವಿಧ ಕಾಮೆಂಟ್ ಮಾಡಿದ್ದಾರೆ.