Wed. Nov 20th, 2024

Mangalore: : ಆಗಸ್ಟ್ 3 ರವರೆಗೆ ಮೀನುಗಾರರು ಕಡಲಿಗೆ ಇಳಿಯದಂತೆ ಆದೇಶ ಹೊರಡಿಸಿದ ದ.ಕ. ಡಿಸಿ ಮುಲ್ಲೈ ಮುಹಿಲನ್

ಮಂಗಳೂರು :(ಆ.1) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹವಾಮಾನ ವೈಪರೀತ್ಯ ಹಿನ್ನೆಲೆ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ದ.ಕ. ಜಿಲ್ಲಾಡಳಿತ ಸೂಚಿಸಿದೆ.

ಇದನ್ನೂ ಓದಿ: 🛑Shimla cloudburst : ವಯನಾಡ್ ದುರಂತದ ಬೆನ್ನಲ್ಲೇ ಶಿಮ್ಲಾದಲ್ಲಿ ಮೇಘಸ್ಫೋಟ – 30 ಕ್ಕೂ ಹೆಚ್ಚು ಮಂದಿ ನಾಪತ್ತೆ

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಈ ಆದೇಶ ಹೊರಡಿಸಿದ್ದಾರೆ. ಆಳ ಸಮುದ್ರ ಮೀನುಗಾರಿಕೆಗೆ ವಿಧಿಸಲಾಗಿದ್ದ, 60 ದಿನಗಳ ನಿಷೇಧದ ಅವಧಿ ಬುಧವಾರ ಜು.31ಕ್ಕೆ ಕೊನೆಗೊಂಡಿತ್ತು.

ಆದರೆ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಎರಡು ತಿಂಗಳ ನಿಷೇಧ ಕೊನೆಗೊಂಡು, ವಾಡಿಕೆಯಂತೆ ಇಂದು ಆಗಸ್ಟ್ 1ರಂದು ಆಳ ಮೀನುಗಾರಿಕೆ ಆರಂಭವಾಗಬೇಕಿತ್ತು.

ಆದರೆ ರೆಡ್ ಆಲರ್ಟ್ ಇರುವ ಹಿನ್ನೆಲೆಯಲ್ಲಿ ಮೀನುಗಾರರು ಕಾಯುವಂತಾಗಿದೆ. ಹವಾಮಾನ ವೈಪರೀತ್ಯದಿಂದ ಕಡಲು ಪ್ರಕ್ಷುಬ್ಧಗೊಂಡಿದೆ.

ಇಂತಹ ಸಂದರ್ಭ ಮೀನುಗಾರಿಕಾ ಇಲಾಖೆಯು ನೀಡಿರುವ ಸೂಚನೆಯ ಮೇರೆಗೆ ಮೀನುಗಾರಿಕಾ ಸಂಘಟನೆಗಳು ಮೀನುಗಾರರಿಗೆ ಆಗಸ್ಟ್ 3ರವರೆಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿವೆ.

Leave a Reply

Your email address will not be published. Required fields are marked *