Wed. Nov 20th, 2024

Wayanad landslide: ಏರುತ್ತಲೇ ಇದೆ ಶವಗಳ ಲೆಕ್ಕ- ಕಣ್ಣೀರು ತರಿಸುವಂತಿದೆ ಕೇರಳದ ಘೋರ ದೃಶ್ಯ

ವಯನಾಡ್:‌(ಆ.1) ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಮಡಿದವರ ಸಂಖ್ಯೆ ಏರುತ್ತಲೇ ಇದೆ. ಇಲ್ಲಿವರೆಗೆ 282 ಶವಗಳು ಪತ್ತೆಯಾಗಿದ್ದು, ಇನ್ನೂ ಶವಗಳು ಸಿಗುತ್ತಲೇ ಇವೆ.

ಇದನ್ನೂ ಓದಿ: 🌊ಮಂಗಳೂರು: ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಏರಿಕೆ- ಪೊಳಲಿ, ಅಮ್ಮುಜೆ ಭಾಗದಲ್ಲಿ ತಗ್ಗು ಪ್ರದೇಶ ಜಲಾವೃತ

ಇಂದು ಕಾರ್ಯಾಚರಣೆ ಮುಂದುವರೆದಿದ್ದು, ಇನ್ನಷ್ಟು ಶವಗಳು ಸಿಗುವ ಸಾಧ್ಯತೆಯಿದೆ.

ಈ ಗುಡ್ಡ ಕುಸಿತದ ಭೀಕರತೆ ಎಷ್ಟಿತ್ತೆಂದರೆ, 80 ಕಿ.ಮೀ. ದೂರದವರೆಗೆ ಶವಗಳು ಕೊಚ್ಚಿಕೊಂಡು ಹೋಗಿವೆ. ಸೂಜಿಪಾರ್‌ ಅರಣ್ಯದ ಮೂಲಕ ನೆಲಂಬೂರಿ ನದಿಯಲ್ಲಿ ಕೊಚ್ಚಿಹೋಗಿದ್ದ ಶವಗಳು ಪತ್ತೆಯಾಗಿದ್ದು, 21 ಆಂಬುಲೆನ್ಸ್‌ನಲ್ಲಿ 41 ಶವಗಳನ್ನು ಮೆಪ್ಪಾಡಿಗೆ ರವಾನೆ ಮಾಡಲಾಗಿದೆ.

ಈ ಆಂಬುಲೆನ್ಸ್‌ಗಳು ಸಾಲಾಗಿ ಸಾಗುವ ದೃಶ್ಯವುಳ್ಳ ವಿಡಿಯೊವೊಂದು ವೈರಲ್‌ ಆಗಿದೆ. ಅರ್ಧ ಕಿ.ಮೀ. ಉದ್ದದ ಸಾಲಿನಲ್ಲಿ ಆಂಬುಲೆನ್ಸ್‌ಗಳು ಸಾಗುತ್ತಿರುವುದನ್ನು ನೋಡಿದರೆ ಎಂತಹವರ ಕಣ್ಣಲ್ಲೂ ಕಣ್ಣೀರು ಬರದಿರಲಾರದು.

ನಿಜಕ್ಕೂ ಇಂತಹ ಸನ್ನಿವೇಶ ಯಾರಿಗೂ ಬರುವುದು ಬೇಡವೆಂಬ ಪ್ರಾರ್ಥನೆ ಮನದಲ್ಲೇ ಮೂಡುವುದು ಖಚಿತ.

Leave a Reply

Your email address will not be published. Required fields are marked *