Wed. Nov 20th, 2024

Kerala: ಕೇರಳದ ಜನತೆಗೆ ಮತ್ತೊಂದು ಆತಂಕ ಸೃಷ್ಟಿ ಮಾಡಿದ ಸಾಂಕ್ರಾಮಿಕ ರೋಗ- ಮಾಸ್ಕ್‌ ಕಡ್ಡಾಯ ಮಾಡಿದ ಆರೋಗ್ಯ ಇಲಾಖೆ

ಕೇರಳ:(ಆ.2) ವಯನಾಡ್‌ ಜಿಲ್ಲೆಯಲ್ಲಿ ಭೀಕರ ಭೂಕುಸಿತದಿಂದ ತತ್ತರಿಸಿರುವ ಕೇರಳ ರಾಜ್ಯಕ್ಕೆ ಮತ್ತೊಂದು ಆತಂಕ ಎದುರಾಗಿದೆ. ವರುಣನ ಆರ್ಭಟ ಇಡೀ ರಾಜ್ಯದ ಮೇಲೆ ತಾಂಡವವಾಡುತ್ತಿದೆ.

ಇದನ್ನೂ ಓದಿ: 🛑ಬೆಳ್ತಂಗಡಿ : ಜನರಿಗೆ ಸ್ಪಂದನೆ ನೀಡದ ಮರೋಡಿ ಗ್ರಾಮ ಲೆಕ್ಕಾಧಿಕಾರಿಯನ್ನು ಅಮಾನತುಗೊಳಿಸಿದ ಜಿಲ್ಲಾಧಿಕಾರಿ ಮುಗಿಲನ್

ಹೀಗಿರುವಾಗ ಕೇರಳದಲ್ಲಿ H1N1 ಸಾಂಕ್ರಾಮಿಕದ ಭೀತಿ ಎದುರಾಗಿದೆ. ಅದೂ ಕೂಡ ವಯನಾಡ್‌ನಲ್ಲಿಯೇ ಎಚ್‌1ಎನ್‌1 ಸಾಂಕ್ರಾಮಿಕದ ಆತಂಕ ಎದುರಾಗಿದೆ. ಈ ಸೂಚನೆ ಸಿಕ್ಕ ಬೆನ್ನಲ್ಲಿಯೇ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್‌ ಕಡ್ಡಾಯ ಮಾಡಿ ಕೇರಳ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಸದ್ಯ ಆಸ್ಪತ್ರೆ ಮತ್ತು ಕಾಳಜಿ ಕೇಂದ್ರದಲ್ಲಿ ಮಾಸ್ಕ್ ಕಡ್ಡಾಯ ಮಾಡಿ ಕೇರಳ ಸರ್ಕಾರ ಆದೇಶ ಮಾಡಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಕೇರಳ ಸರ್ಕಾರ ನೀಡಿದೆ.

ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸ್ವಯಂ ಸೇವಕರುಗಳಿಂದ ಸೂಚನೆಯನ್ನು ಹೊರಡಿಸಲಾಗಿದೆ. ಕೊರೋನಾ ಮಹಾಮಾರಿ ಈ ಹೊತ್ತಿನಲ್ಲಿ ಕೇರಳಕ್ಕೆ ಮತ್ತೆ ನೆನಪಾಗುತ್ತಿದೆ. H1N1 ತೀವ್ರತೆ ಅರಿತು ಕೇರಳದಲ್ಲಿ ಈ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *