ಕುವೆಟ್ಟು:(ಆ.2) ಕುವೆಟ್ಟು, ಓಡಿಲ್ನಾಳ ಗ್ರಾಮದ ಹಲವು ಕಡೆಗಳಲ್ಲಿ ವಿಪರೀತ ಮಳೆ ಸುರಿದ ಕಾರಣ ಗುಡ್ಡಕುಸಿತದಿಂದಾಗಿ ಮನೆ, ರಸ್ತೆ, ಕಟ್ಟಡಗಳಿಗೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ; 🛑ಪುತ್ತೂರು; ಗುಡ್ಡ ಕುಸಿದು ಮಾಣಿ-ಮೈಸೂರು ಹೆದ್ದಾರಿ ಬಂದ್!

ಘಟನಾ ಸ್ಥಳಗಳಿಗೆ ಕುವೆಟ್ಟು ಪಂಚಾಯತ್ ವತಿಯಿಂದ ಭೇಟಿ ನೀಡಲಾಯಿತು. ಕೆಲವು ಸ್ಥಳಗಳಲ್ಲಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದ್ದ, ರಸ್ತೆಯನ್ನು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಯಿತು.





ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ತಂಡದ ಕಾರ್ಯಕರ್ತರು, ಈ ಸಂದರ್ಭದಲ್ಲಿ ಒಂದು ಮನೆಯ ಮೇಲೆ ಗುಡ್ಡದ ಕುಸಿತದಲ್ಲಿ ಬಿದ್ದಿರುವ ಮಣ್ಣನ್ನು ತೆರವು ಕಾರ್ಯವನ್ನು ಮಾಡುವ ಮೂಲಕ ಕಷ್ಟದಲ್ಲಿರುವ ಮನೆಯವರಿಗೆ ಶ್ರಮದಾನದ ಮೂಲಕ ಕೈ ಜೋಡಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ , ಉಪಾಧ್ಯಕ್ಷರಾದ ಗಣೇಶ್ ಕುಲಾಲ್, ಸದಸ್ಯರು, ಕುವೆಟ್ಟು ಬಿಜೆಪಿ 116 ಬೂತ್ ಸಮಿತಿ ಅಧ್ಯಕ್ಷರಾದ ಪ್ರದೀಪ್ , ಅಭಿವೃದ್ಧಿ ಅಧಿಕಾರಿ, ಗ್ರಾಮ ಕರಣಿಕರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
