ಬೆಂಗಳೂರು:(ಆ.3) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಪ್ರಾರಂಭವಾಗಿದ್ದ ಈ ಗಲಾಟೆ, ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡಿದೆ.
ಇದನ್ನೂ ಓದಿ: 🛑ಚಾರ್ಮಾಡಿ: ಭಾರೀ ಮಳೆಗೆ ಕುಸಿದ ಮನೆ – ಮನೆಯವರು ಅಪಾಯದಿಂದ ಪಾರು
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹುಡುಕುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಈ ಕೇಸ್ ಗೆ ಪ್ರಮುಖ ಸಾಕ್ಷಿಯಾಗಿ ಅದೇ ಮಾಹಿತಿ ಇರಲಿದೆ. ಕೊಲೆ ನಡೆದ ಬಳಿಕ ರೇಣುಕಾಸ್ವಾಮಿ ಮೊಬೈಲ್ ಅನ್ನು ಮೋರಿಯಲ್ಲಿ ಎಸೆದಿದ್ದರು. ಇದೀಗ ಆ ಮೊಬೈಲ್ ಪೊಲೀಸರಿಗೆ ಸಿಕ್ಕಿದೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ.
ಅಷ್ಟೇ ಅಲ್ಲದೆ, ರೇಣುಕಾಸ್ವಾಮಿ ಮೊಬೈಲ್ ಅನ್ನು ರಿಟ್ರೀವ್ ಮಾಡಲಾಗುತ್ತದೆ. ಒಂದು ವೇಳೆ ಆ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾದರೆ, ನಟ ದರ್ಶನ್ ಸೇರಿ ಇತರರಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ.
ರೇಣುಕಾ ಸ್ವಾಮಿ ಬಳಸಿದ್ದ ನಂಬರ್ʼನಲ್ಲೇ ಹೊಸ ಸಿಮ್ ಪಡೆದುಕೊಂಡು ಡೇಟಾ ರಿಟ್ರೀವ್ ಮಾಡಲಾಗಿದೆ. ಇನ್ನು ಆತ ಬಳಕೆ ಮಾಡಿದ್ದ ವಾಟ್ಸಪ್ ,ಇನ್‌ಸ್ಟಾಗ್ರಾಂ, ಫೇಸ್ ಬುಕ್ ಮುಂತಾದ ಆ್ಯಪ್ʼಗಳ ಮಾಹಿತಿ ಕೂಡ ಈಗ ಪೊಲೀಸರಿಗೆ ಸಿಕ್ಕಿದ್ದು, ಆತ ಯಾರಿಗೆಲ್ಲ ಸಂದೇಶ ಕಳಿಸಿದ್ದ? ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ ಮೆಸೇಜ್ ಏನು? ಅದಕ್ಕೆ ಆಕೆ ಕೊಟ್ಟ ಪ್ರತಿಕ್ರಿಯೆ ಏನು ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಇನ್ನು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವೇ ಪ್ರಮುಖ ಸಾಕ್ಷಿಯಾಗಲಿದೆ.