Wed. Nov 20th, 2024

Bengaluru: ಸಿಕ್ಕೇಬಿಡ್ತು ರೇಣುಕಾಸ್ವಾಮಿ ಕಳಿಸಿದ ಅಶ್ಲೀಲ ಮೆಸೇಜ್‌ – ಪವಿತ್ರಾ ಗೌಡ ಕೊಟ್ಟ ರಿಪ್ಲೈ ಏನು?

ಬೆಂಗಳೂರು:(ಆ.3) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಪ್ರಾರಂಭವಾಗಿದ್ದ ಈ ಗಲಾಟೆ, ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡಿದೆ.

ಇದನ್ನೂ ಓದಿ: 🛑ಚಾರ್ಮಾಡಿ: ಭಾರೀ ಮಳೆಗೆ ಕುಸಿದ ಮನೆ – ಮನೆಯವರು ಅಪಾಯದಿಂದ ಪಾರು

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹುಡುಕುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಈ ಕೇಸ್‌ ಗೆ ಪ್ರಮುಖ ಸಾಕ್ಷಿಯಾಗಿ ಅದೇ ಮಾಹಿತಿ ಇರಲಿದೆ. ಕೊಲೆ ನಡೆದ ಬಳಿಕ ರೇಣುಕಾಸ್ವಾಮಿ ಮೊಬೈಲ್‌ ಅನ್ನು ಮೋರಿಯಲ್ಲಿ ಎಸೆದಿದ್ದರು. ಇದೀಗ ಆ ಮೊಬೈಲ್ ಪೊಲೀಸರಿಗೆ ಸಿಕ್ಕಿದೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ.

ಅಷ್ಟೇ ಅಲ್ಲದೆ, ರೇಣುಕಾಸ್ವಾಮಿ ಮೊಬೈಲ್ ಅನ್ನು​ ರಿಟ್ರೀವ್ ಮಾಡಲಾಗುತ್ತದೆ. ಒಂದು ವೇಳೆ ಆ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾದರೆ, ನಟ ದರ್ಶನ್‌ ಸೇರಿ ಇತರರಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ.

ರೇಣುಕಾ ಸ್ವಾಮಿ ಬಳಸಿದ್ದ ನಂಬರ್ʼ​ನಲ್ಲೇ ಹೊಸ ಸಿಮ್​ ಪಡೆದುಕೊಂಡು ಡೇಟಾ ರಿಟ್ರೀವ್​ ಮಾಡಲಾಗಿದೆ. ಇನ್ನು ಆತ ಬಳಕೆ ಮಾಡಿದ್ದ ವಾಟ್ಸಪ್ ,ಇನ್‌ಸ್ಟಾಗ್ರಾಂ, ಫೇಸ್‌ ಬುಕ್ ಮುಂತಾದ ಆ್ಯಪ್ʼ​ಗಳ ಮಾಹಿತಿ ಕೂಡ ಈಗ ಪೊಲೀಸರಿಗೆ ಸಿಕ್ಕಿದ್ದು, ಆತ ಯಾರಿಗೆಲ್ಲ ಸಂದೇಶ ಕಳಿಸಿದ್ದ? ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ ಮೆಸೇಜ್​ ಏನು? ಅದಕ್ಕೆ ಆಕೆ ಕೊಟ್ಟ ಪ್ರತಿಕ್ರಿಯೆ ಏನು ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಇನ್ನು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವೇ ಪ್ರಮುಖ ಸಾಕ್ಷಿಯಾಗಲಿದೆ.

Leave a Reply

Your email address will not be published. Required fields are marked *