Wed. Nov 20th, 2024

Charmadi Pernale ಕೆರೆಯ ಗೇಟ್ ವಾಲ್ ಬ್ಲಾಕ್ – ಈಶ್ವರ್ ಮಲ್ಪೆ ಅವರಿಂದ ಕಾರ್ಯಾಚರಣೆ

ಚಾರ್ಮಾಡಿ‌ :(ಆ.3) ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಪೆರ್ನಾಲೆ ಕೆರೆ ತುಂಬಿದ್ದು, ಕೆರೆಯ ಗೇಟು ತೆರೆಯಲು ಸ್ಥಳೀಯರು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು, ಕೆರೆಯ ಕೆಳ ಭಾಗದಲ್ಲಿ ವಾಸಿಸುತ್ತಿರುವ ಜನರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ; 🛑ಮಂಗಳೂರು: “ರಾಜ್ಯ ಸರಕಾರ ದಿವಾಳಿಯಾಗಿದೆ” – ವೇದವ್ಯಾಸ ಕಾಮ

ಅರಣ್ಯ ಭಾಗದಲ್ಲಿ ಸುಮಾರು 27 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಈ ಕೆರೆ ಗ್ರಾಮದ ಸುಮಾರು 300ಕ್ಕಿಂತ ಅಧಿಕ ಕುಟುಂಬಗಳಿಗೆ ಬೇಸಿಗೆಯ ಕೃಷಿ ನೀರಿಗೆ ಆಧಾರವಾಗಿದೆ. ನೀರು ತುಂಬಿರುವುದರಿಂದ ಕೆರೆ ಕಟ್ಟೆ ಒಡೆಯುವ ಭೀತಿಯಲ್ಲಿದೆ.

ಸ್ಥಳಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ದೌಡಾಯಿಸಿದ್ದಾರೆ. ಸ್ಥಳದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ತಂಡ ಮೊಕ್ಕಂ ಹೂಡಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕೂಡ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದ್ದಾರೆ.

ಧರ್ಮಸ್ಥಳ ಪೊಲೀಸರು ಕೂಡ ಸ್ಥಳದಲ್ಲಿದ್ದಾರೆ.26 ಅಡಿ ಅಳಕ್ಕೆ ಮುಳುಗಿ ಈಶ್ವರ್ ಮಲ್ಪೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *