ಮಂಗಳೂರು :(ಆ.3) ರಾಷ್ಟ್ರೀಯ ಬಿಲ್ಲವ ಈಡಿಗ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಬಿಲ್ಲವ ಸಮಾಜದ ಗುರುಗಳಾದ
ಡಾ.ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ಯವರ ನಿರ್ದೇಶನದಂತೆ ಕಾವೂರು ರೂಟ್ ನಂ 13 ಕೃಷ್ಣ ಪ್ರಸಾದ್ ಬಸ್ ಚಾಲಕ , ನಿರ್ವಾಹಕ ಹಾಗೂ ಸಹ ನಿರ್ವಾಹಕರಾಗಿರುವ ಗಜೇಂದ್ರ ಕುಂದರ್ ,ಮಹೇಶ್ ಪೂಜಾರಿ ,ಸುರೇಶ್ ಇವರು ಒಂದು ಹೆಣ್ಣು ಮಗಳ ಜೀವ ಉಳಿಸಿದ ಸಾಹಸದ ಘಟನೆಯ ಬಗ್ಗೆ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿ ವತಿಯಿಂದ ಸನ್ಮಾನಿಸಲಾಯಿತು.


ಈ ಹಿನ್ನಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಗಂಟೆ 2.00ಕ್ಕೇ ಕುಂಜತ್ ಬೈಲಿನ ಬಸ್ ನಿಲ್ದಾಣದ ಬಳಿ ಸನ್ಮಾನ ಕಾರ್ಯ ನಡೆಯಿತ್ತು .ಈ ಸನ್ಮಾನ ಕಾರ್ಯದಲ್ಲಿ ರಾಷ್ಟ್ರೀಯ ಬಿಲ್ಲವ ಈಡಿಗ ಸಮುದಾಯದ ಪದಾಧಿಕಾರಿಗಳಾದ ನವೀನ್ ,ವಿಘ್ನೇಶ್ ,ತೇಜಸ್ ಪೂಜಾರಿ ,ಶೋಭಾ , ಪ್ರಮೀಳಾ ಈಶ್ವರ್ ,ವೈಶಾಲಿ ,ಮುಕೇಶ್ ಪೂಜಾರಿ , ಕೇಶವ್ ಮತ್ತಿತರರು ಉಪಸ್ಥಿತರಿದ್ದು ಸನ್ಮಾನ ನೆರೆವೇರಿಸಿದರು.

ಕಾವೂರು ರೂಟ್ ನಂ 13 ಕೃಷ್ಣ ಪ್ರಸಾದ್ ಬಸ್ ಚಾಲಕ ನಿರ್ವಾಹಕ ಹಾಗೂ ಸಹ ನಿರ್ವಾಹಕರಾಗಿರುವ ಗಜೇಂದ್ರ ಕುಂದರ್ ,ಮಹೇಶ್ ಪೂಜಾರಿ ,ಸುರೇಶ್ ಇವರು ತಮ್ಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಒಬ್ಬಳಿಗೆ ಎದೆನೋವು ಕಾಣಿಸಿಕೊಂಡ ತುರ್ತು ಸಂದರ್ಭದಲ್ಲಿ ಸಿನಿಮೀಯ ಶೈಲಿಯಲ್ಲಿ 6 ಕಿಲೋಮೀಟರ್ ನ್ನು ಅದು ಕೂಡ ಸಂಜೆ ಟ್ರಾಫಿಕ್ ಇದ್ದರೂ 6 ನಿಮಿಷದಲ್ಲಿ ನೇರವಾಗಿ ಆಸ್ಪತ್ರೆಗೆ ಬಸ್ಸನ್ನು ನುಗ್ಗಿಸಿ ಜೀವ ಉಳಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು ಅಲ್ಲದೆ ಇವರ ಕಾರ್ಯಕ್ಕೆ ಪ್ರಶಂಸೆಗಳ ಸುರಿಮಳೆ ಬಂದಿತ್ತು . ಇದನ್ನು ಮನಗಂಡು ಸನ್ಮಾನಿಸಲಾಯಿತು.