Tirupati Laddu:(ಆ.2) ವಿಶ್ವದ ಶ್ರೀಮಂತ ದೇವಸ್ಥಾನ ಎಂದರೆ ನೆನಪಾಗೋದು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ. ವರ್ಷದಿಂದ ವರ್ಷಕ್ಕೆ ಈ ದೇವಸ್ಥಾನದ ಆದಾಯ ಹೆಚ್ಚಾಗುತ್ತಿದೆ. ಇಲ್ಲಿನ ದೇವರು ಎಷ್ಟು ಪ್ರಸಿದ್ದವೋ ಈ ದೇವಸ್ಥಾನದಲ್ಲಿ ನೀಡುವ ಲಡ್ಡು ಕೂಡ ಅಷ್ಟೇ ಪ್ರಸಿದ್ದ. ಈಗ ಈ ಪವಿತ್ರ ಲಡ್ಡು ಪ್ರಸಾದಕ್ಕೆ ಆರಂಭವಾಗಿ 309 ವರ್ಷವಾಗಿದೆ.
ಇದನ್ನೂ ಓದಿ: 🛑Charmadi Pernale ಕೆರೆಯ ಗೇಟ್ ವಾಲ್ ತೆರೆಯುವಲ್ಲಿ ಈಶ್ವರ್ ಮಲ್ಪೆ ತಂಡ ಯಶಸ್ವಿ
ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಾಲಯದ ‘ತಿರುಪತಿ ಲಡ್ಡು’ ಪ್ರಸಾದ ನೆನೆದರೆ ಭಕ್ತಿಯ ಜೊತೆಗೆ ಬಾಯಲ್ಲಿ ನೀರು ಬರುತ್ತದೆ. ತುಪ್ಪ ಮತ್ತು ಏಲಕ್ಕಿ ಆಸ್ವಾದ ಹೊಂದಿರುವ ಈ ಲಡ್ಡು ವಿಶ್ವ ಪ್ರಸಿದ್ಧ. ಈಗ ಈ ಪವಿತ್ರ ಪ್ರಸಾದಕ್ಕೆ 309 ವರ್ಷ. ಇದನ್ನು ಮೊದಲ ಬಾರಿಗೆ 1715ರ ಆಗಸ್ಟ್ 2 ರಂದು ಪ್ರಾರಂಭಿಸಲಾಯಿತು.
ನಂಬಿಕೆಗಳ ಪ್ರಕಾರ ಇಲ್ಲಿನ ಪ್ರಸಾದ ಸ್ವೀಕರಿಸದೆ ತಿರುಪತಿ ದೇವಸ್ಥಾನ ಯಾತ್ರೆ ಸಂಪೂರ್ಣವಾಗುವುದಿಲ್ಲ ಎನ್ನಲಾಗುತ್ತದೆ. ಹಾಗಾಗಿ ಇಲ್ಲಿಗೆ ಬಂದ ಭಕ್ತರು ಲಡ್ಡು ಪ್ರಸಾದ ಸ್ವೀಕರಿಸದೆಯೇ ಮನೆಗೆ ತೆರಳುವುದಿಲ್ಲ.
ಇಲ್ಲಿ ನಡೆಯುವ ಬ್ರಹ್ಮೋತ್ಸವದ ಸಮಯದಲ್ಲಿ ಈ ಲಡ್ಡಿಗೆ ಅಪಾರ ಬೇಡಿಕೆಯಿರುತ್ತದಂತೆ. ಇಲ್ಲಿ ಪ್ರತಿನಿತ್ಯ 270 ಜನ ಬಾಣಸಿಗರು ಸೇರಿದಂತೆ 620 ಜನ ಲಡ್ಡು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಾರೆ ಎಂದು ಇಲ್ಲಿನ ಅಧಿಕಾರಿಗಳು ಹೇಳುತ್ತಾರೆ.