ಚಾರ್ಮಾಡಿ :(ಆ.3) ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಪೆರ್ನಾಲೆ ಕೆರೆ ತುಂಬಿದ್ದು, ಕೆರೆಯ ಗೇಟು ತೆರೆಯಲು ಸ್ಥಳೀಯರು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದು, ಕೆರೆಯ ಕೆಳ ಭಾಗದಲ್ಲಿ ವಾಸಿಸುತ್ತಿರುವ ಜನರಲ್ಲಿ ಆತಂಕ ಮೂಡಿಸಿತ್ತು.
ಇದನ್ನೂ ಓದಿ:🛑Charmadi Pernale ಕೆರೆಯ ಗೇಟ್ ವಾಲ್ ಬ್ಲಾಕ್ – ಈಶ್ವರ್ ಮಲ್ಪೆ ಅವರಿಂದ ಕಾರ್ಯಾಚರಣೆ
ಅರಣ್ಯ ಭಾಗದಲ್ಲಿ ಸುಮಾರು 27 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಈ ಕೆರೆ ಗ್ರಾಮದ ಸುಮಾರು 300ಕ್ಕಿಂತ ಅಧಿಕ ಕುಟುಂಬಗಳಿಗೆ ಬೇಸಿಗೆಯ ಕೃಷಿ ನೀರಿಗೆ ಆಧಾರವಾಗಿದೆ. ನೀರು ತುಂಬಿರುವುದರಿಂದ ಕೆರೆ ಕಟ್ಟೆ ಒಡೆಯುವ ಭೀತಿಯಲ್ಲಿತ್ತು.
ಸ್ಥಳಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ದೌಡಾಯಿಸಿ, ಗೇಟ್ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ , ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ, ಪಿಡಿಒ ಪುರುಷೋತ್ತಮ, ಜನಪ್ರತಿನಿಧಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು.