ಕರಾವಳಿ ಭಾಗದಲ್ಲಿ ಆಟಿ ಅಮಾವಾಸ್ಯೆಯ ಆಚರಣೆ ವಿಶೇಷ ಸ್ಥಾನವನ್ನು ಪಡೆದಿದೆ. ಈ ಆಚರಣೆ ಆರೋಗ್ಯದ ದೃಷ್ಟಿಯಿಂದಲೂ ಬಹಳ ಒಳ್ಳೆಯದು. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಸರ್ಪಪರ್ಣಿ ಅಥವಾ ಪಾಲೆಮರದ ತೊಗಟೆ ಯನ್ನು ಪುರುಷರೇ ಕೆತ್ತಿ ತರಬೇಕು. ಆಟಿ ಅಮಾವಾಸ್ಯೆಯಂದು ಈ ತೊಗಟೆಯ ಕಷಾಯ ಕುಡಿದರೆ ಸರ್ವ ರೋಗದಿಂದಲೂ ದೂರವಿದ್ದಂತೆ ಎನ್ನುವ ಪ್ರತೀತಿ.
ಪಾಲೆಮರದ ಕೆತ್ತೆಯನ್ನು ಚೆನ್ನಾಗಿ ತೊಳೆದು ಹೊರಕವಚವನ್ನು ತೆಗೆದು, ಅದನ್ನು ಜಜ್ಜಿ ಹಾಲು ತೆಗೆಯಲಾಗುತ್ತದೆ. ಕಹಿಯಾಗಿರುವ ಈ ಕಷಾಯವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಆಯುರ್ವೇದದಲ್ಲಿ ಈ ಸಪ್ತಪರ್ಣಿ ಕೆತ್ತೆಯನ್ನು ಅನೇಕ ಅರೋಗ್ಯ ಸಮಸ್ಯೆಗಳಿಗೆ ಚಿಕೆತ್ಸೆಗಾಗಿ ಬಳಸುತ್ತಾರೆ. ಹೊಟ್ಟೆಯ ಖಾಯಿಲೆಗಳು, ಹೊಟ್ಟೆ ಹುಳದ ಸಮಸ್ಯೆ, ಮಲೇರಿಯಾ, ಅಪಸ್ಮಾರ, ಚರ್ಮ ರೋಗ, ಅಸ್ತಮಾ, ಅತಿಸಾರ, ಸಂಧಿವಾತ, ಜ್ವರ, ಸ್ತ್ರೀ ರೋಗಕ್ಕೂ ಉತ್ತಮ ಮನೆ ಮದ್ದಾಗಿದೆ.
ರೋಗ ನಿರೋಧಕ ಶಕ್ತಿಯನ್ನೂ ಕೂಡಾ ಹೆಚ್ಚಿಸುತ್ತದೆ. ತಲೆ ಹೊಟ್ಟಿನ ಸಮಸ್ಯೆಗೂ ಇದು ಉತ್ತಮ ಪರಿಹಾರವಾಗಿದೆ.