Tue. Jun 3rd, 2025

Basruru : ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಕಡಿದ ಭೂಪ

ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಕಡಿದ ಭೂಪ

ಕುಂದಾಪುರ (ಜು 04): ಸೊರಬ ತಾಲೂಕು ಮೂಲದ ಲಕ್ಷ್ಮಣ ಮತ್ತು ಅನಿತಾ ದಂಪತಿಗಳು ನಾಲ್ಕು ತಿಂಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ವಾಸಕ್ಕಾರಂಭಿಸಿದ್ದರು. ತೋಟ ನೋಡಿಕೊಳ್ಳಲು ಬಂದಿದ್ದ ದಂಪತಿ ಬಸ್ರೂರು ಕಾಶಿ ಮಠಕ್ಕೆ ಸಂಬಂಧಪಟ್ಟ ಮನೆಯಲ್ಲಿ ವಾಸವಿದ್ದರು. ಲಕ್ಷ್ಮಣ ಎಂಬುವವರು ಶನಿವಾರ ರಾತ್ರಿ ಕಂಠ ಪೂರ್ತಿ ಕುಡಿದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಪತ್ನಿ ಅನಿತಾ ರಕ್ತದ ಮಡುವಿನಲ್ಲಿದ್ದರೂ ಪತಿ ಕೈಯಲ್ಲಿ ಕತ್ತಿ ಹಿಡಿದು ನರ್ತಿಸುತ್ತಿದ್ದ. ಸ್ಥಳಕ್ಕೆ ಬಂದ ಪೊಲೀಸ್ ಅಶ್ರವಾಯು ಪ್ರಯೋಗಿಸಿ ಒಂದೂವರೆ ಗಂಟೆಯ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *