ಬೆಳ್ತಂಗಡಿ (ಜು. 04): ಕೊಕ್ರಾಡಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

2020ರಲ್ಲಿ ಯೋಗೀಶ್ ಎಂಬಾತ ಬಾಲಕಿಯನ್ನು ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಪರಿಣಾಮ, ಬಾಲಕಿ ಗರ್ಭವತಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನ್ಯಾಯಧೀಶರಾದ ಮಾನು ಕೆ. ಎಸ್ ಅವರು ಆರೋಪಿಗೆ ಪೋಕ್ಸೋ ಕಾಯಿದೆಯಂತೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ಬಾಲಕಿಗೆ ನೀಡುವಂತೆ ಆದ್ದೇಶಿಸಿದ್ದಾರೆ.
