Wed. Nov 20th, 2024

Bantwala: ಹಿಂದೂ‌ ಸಂಘಟನೆ ಕಾರ್ಯಕರ್ತರ ನಡುವೆ ಹೊಡೆದಾಟ- ಮೂವರು ಆಸ್ಪತ್ರೆಗೆ ದಾಖಲು!!

ಬಂಟ್ವಾಳ:(ಆ.5) ಹಿಂದೂ ಸಂಘಟನೆಯ ಯುವಕರ ವೈಯಕ್ತಿಕ ವಿಚಾರವಾಗಿ ನಡೆದ ಹೊಡೆದಾಟ ನಡೆದು ಚೂರಿಯಿಂದ ಇರಿಯುವ ಮೂಲಕ ಕೊನೆಗೊಂಡಿದೆ.

ಇದನ್ನೂ ಓದಿ: 📍Daily Horoscope : ಇಂದು ಈ ರಾಶಿಯವರಿಗೆ ಆರ್ಥಿಕ ನಷ್ಟ ಉಂಟಾಗಬಹುದು


ಬಿಸಿರೋಡಿನ ಹಿಂದೂ ಸಂಘಟನೆಯ ಯುವಕರ ತಂಡ ಹಾಗೂ ಬಂಟ್ವಾಳ ಹಿಂದೂ‌ಸಂಘಟನೆಯ ಯುವಕರ ತಂಡದ ನಡುವೆ ನಡೆದ ಗಲಾಟೆ ಚೂರಿ ಇರಿತದಲ್ಲಿ ಅಂತ್ಯಗೊಂಡ ಘಟನೆ ಇಂದು ಸಂಜೆ ಬಂಟ್ವಾಳ ‌ಬೈಪಾಸ್ ನಲ್ಲಿ ನಡೆದಿದ್ದು, ಘಟನೆಯಲ್ಲಿ ಇತ್ತಂಡಗಳ ಮೂವರು ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಪೃಥ್ವಿರಾಜ್, ವಿನಿತ್ ಹಾಗೂ ಪುಷ್ಪರಾಜ್ ಎಂಬವರು ಗಾಯಗೊಂಡಿದ್ದು , ಉಳಿದಂತೆ ತಂಡದಲ್ಲಿ ಯಾರು ಯಾರು ಇದ್ದರು ಎಂಬುದು ಪೋಲೀಸರ ತನಿಖೆಯ ಬಳಿಕ ತಿಳಿಯಬೇಕು.


ಘಟನೆಗೆ ಸ್ಪಷ್ಟವಾದ ಕಾರಣವೇನು ಎಂಬುದು ಇನ್ನೂ ಕೂಡ ತಿಳಿದು ಬಂದಿಲ್ಲ. ಆದರೆ ಪೋಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಹುಡುಗಿ ವಿಚಾರವಾಗಿ ಗಲಾಟೆ ನಡೆದು ಬಳಿಕ ಮನೆಯವರ ಹೆತ್ತವರಿಗೆ ಬೈದು ಕೊನೆಯಲ್ಲಿ ಬಹಿರಂಗವಾಗಿ ರಾಜರಸ್ತೆಯಲ್ಲಿ ಪರಸ್ಪರ ಕೈ ಮಿಗಿಲಾಯಿಸಿ ಬಲಾಬಲ ಪ್ರದರ್ಶನ ನಡೆಸಿ ರಕ್ತ ಚೆಲ್ಲಿಸಿ ಕೋಪವನ್ನು ತಣಿಸಿಕೊಂಡಿದ್ದಾರೆ.


ಕೆಲವು ತಿಂಗಳ‌ಹಿಂದೆ ಬಂಟ್ವಾಳದ ಇದೇ ಯುವಕರ ತಂಡ ರಸ್ತೆಯಲ್ಲಿ ಹೊಡೆದಾಟ ನಡೆಸಿಕೊಂಡು ಪ್ರಕರಣ ಪೋಲೀಸ್ ಠಾಣೆಯ ಮೆಟ್ಟಿಲೇರಿ ಬಳಿಕ ರಾಜಿ ಪಂಚಾಯತಿಯಲ್ಲಿ ಮುಗಿದಿತ್ತು. ಇದನ್ನು ಬಂಡವಾಳವಾಗಿಸಿಕೊಂಡ ಸಂಘಟನೆಯ ಯುವಕರ ತಂಡ ಮತ್ತೆ ರಸ್ತೆಯಲ್ಲಿ ರೋಡ್ ಶೋ ಮಾಡಲು ಮುಂದಾಗಿದೆ.


‌ಬಂಟ್ವಾಳ ‌ಪೋಲೀಸರ ಮೃದು ಧೋರಣೆ ಇವರ ಪಾಲಿಗೆ ವರದಾನವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಮತ್ತೆ ಮತ್ತೆ ಇವರು ಗಲಾಟೆ ಮಾಡಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.


ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೋಲೀಸರು ಬೇಟಿ ನೀಡಿದ್ದು ಯಾವ ಕಾರಣಕ್ಕಾಗಿ ಗಲಾಟೆ ನಡೆದಿದೆ ಎಂಬ ಸ್ಪಷ್ಟವಾದ ‌ಮಾಹಿತಿ‌ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *