Wed. Nov 20th, 2024

Daily Horoscope : ಇಂದು ಈ ರಾಶಿಯವರಿಗೆ ಆರ್ಥಿಕ ನಷ್ಟ ಉಂಟಾಗಬಹುದು

Daily Horoscope - ಇಂದು ಈ ರಾಶಿಯವರಿಗೆ ಆತುರವೇ ಅಪಾಯ ತಂದೊಡ್ಡಬಹುದು

ಮೇಷ ರಾಶಿ: ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶವು ಮತ್ತೆ ಸಿಗುವುದು. ವಿವಾದಗಳಿಂದ ನೀವು ಆತಂಕದಲ್ಲಿ ಇರುವಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನಿಮ್ಮ ಕಾರ್ಯಗಳಿಗೆ ಇಂದು ಸಂಗಾತಿಯು ಬೆಂಬಲ ನೀಡಬಹುದು. ಕಛೇರಿಯಲ್ಲಿ ಉಳಿದ ಕೆಲಸಗಳನ್ನು ಮಾಡಲು ನೀವು ಇಂದು ಆದ್ಯತೆ ನೀಡುವಿರಿ.

ವೃಷಭ ರಾಶಿ: ಕೌಟುಂಬಿಕ ತೊಂದರೆಯನ್ನು ಧಾರ್ಮಿಕ ವಿಧಾನದಿಂದ ಸರಿಮಾಡಿಕೊಳ್ಳುವುದು ಉತ್ತಮ. ಆಪ್ತರ ಜೊತೆ ಹೊಸ ಉದ್ಯೋಗವನ್ನು ಆರಂಭಿಸುವ ಪ್ರಯತ್ನದಲ್ಲಿ ಇರುವಿರಿ. ಗೃಹ ಕೃತ್ಯಗಳನ್ನು ಪೂರೈಸಲು ಇಂದು ಅನುಕೂಲ ದಿನ. ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಿದ್ದು ನಿಮಗೆ ಗೊತ್ತಾಗಿ ನೀವು ಅವರನ್ನು ದೂರವಿಡುವಿರಿ.

ಮಿಥುನ ರಾಶಿ: ಅಧಿಕಾರವು ನಿಮ್ಮದಾದ ಕಾರಣ ಜವಾಬ್ದಾರಿಯೂ ನಿಮ್ಮದೇ ಆಗಿರುತ್ತದೆ. ನಿಮಗೆ ಇಂದು ಧೈರ್ಯವು ಕಡಿಮೆ ಆದಂತೆ ತೋರುತ್ತದೆ. ಯಾವ ಕೆಲಸವನ್ನೂ ನೀವು ಭಯಮುಕ್ತವಾಗಿ ಮಾಡಲಾರಿರಿ. ಆಸ್ತಿಯನ್ನು ಇನ್ನೊಬ್ಬರು ಒಡೆದುಕೊಳ್ಳಲು ಸಂಚು ರೂಪಿಸುತ್ತಿರುವರು.

ಕಟಕ ರಾಶಿ: ನಾಯಕರಾಗುವುದಕ್ಕಿಂತ ಹಾಗೆ ನಡೆದುಕೊಳ್ಳುವುದೂ ಮುಖ್ಯವಾಗಲಿದೆ. ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದು ಸಾಧಿಸುವಿರಿ. ನಿಮ್ಮ ಗೌಪ್ಯತೆಯನ್ನು ಕಾಪಾಡಲು ನೀವು ವಿಫಲರಾಗುವಿರಿ. ಉದ್ಯೋಗದಲ್ಲಿ ನೀವು ದಿಕ್ಕು ತೋಚದೆ ಬಹಳ ಆತಂಕ ಪಡುವಿರಿ.

ಸಿಂಹ ರಾಶಿ: ಮಕ್ಕಳಿಂದ ನಿಮ್ಮ ತೊಂದರೆ ದೂರಾಗುವುದು. ನಿಮ್ಮವರ ಜೊತೆ ನಿಮಗೆ ಕೆಲಸ ಮಾಡಲು ಸಾಧ್ಯವಾಗದೇ ಇರಬಹುದು. ನಿಮ್ಮ ಜೊತೆ ಕೆಲಸ ಮಾಡುವವರೂ ನಿಮ್ಮ ವರ್ತನೆಯನ್ನು ಸಹಿಸಲಾರದೇ ದೂರ ಉಳಿಯಬಹುದು. ಹೂಡಿಕೆಯಿಂದ ನಿಮಗೆ ಆರ್ಥಿಕ ತೊಂದರೆ ಅನಿಸುವುದು.

ಕನ್ಯಾ ರಾಶಿ: ಕುಟುಂಬದಲ್ಲಿ ಬರುವ ಕಲಹಕ್ಕೆ ವಿರಾಮದ ಅಗತ್ಯವಿದೆ. ದೀರ್ಘ ಮಾಡಿಕೊಂಡು ದಿನವನ್ನು ಹಾಳುಮಾಡಿಕೊಳ್ಳಬೇಕಾಗುವುದು. ಅನೀಕ್ಷಿತ ತಿರುವುಗಳು ನಿಮಗೆ ಬಹಳ ಉದ್ವೇಗವನ್ನು ಉಂಟುಮಾಡೀತು. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ.

ತುಲಾ ರಾಶಿ: ನಿಮಗೆ ಸಿಗುವ ಜಯದಿಂದ ಕುಟುಂಬಕ್ಕೆ ಸಂತಸ. ನಿಮಗೆ ಸಮಾಜಮುಖೀ ಕಾರ್ಯವನ್ನು ಮಾಡಲು ಉತ್ಸಾಹವಿದ್ದು ನಿಮಗೆ ಮಾರ್ಗದರ್ಶನದ ಕೊರತೆ ಕಾಣಬಹುದು. ಅನ್ನಸಂತರ್ಪಣೆಯ ಪುಣ್ಯವು ಪ್ರಾಪ್ತವಾಗಲಿದೆ.

ವೃಶ್ಚಿಕ ರಾಶಿ: ನಿಮ್ಮ‌ ಸಮಾನರಿಗೂ ಕೆಲವು ಸಂದರ್ಭಲ್ಲಿ ಗೌರವ ಕೊಡಬೇಕಾಗುವುದು. ಮಕ್ಕಳ ವಿಚಾರದಲ್ಲಿ ಸಂತೋಷವಿರಲಿದೆ. ಸ್ತ್ರೀಯರು ಪುರುಷರನ್ನೂ ಪುರುಷರು ಸ್ತ್ರೀಯರನ್ನು ದ್ವೇಷಿಸುವರು. ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ.

ಧನು ರಾಶಿ: ಕಾನೂನಿಗೆ ಸಮ್ಮತವಾದ ಕಾರ್ಯವನ್ನು ಮಾಡುವಿರಿ. ನಿಮ್ಮ ತಿಳಿವಳಿಕೆಯ ಮಟ್ಟವು ಇತರರಿಗೆ ತಿಳಿಯಲಿದೆ. ನಿಮ್ಮ ಬಹುದಿನದ ನಿರೀಕ್ಷೆ ಇಂದು ಸಾಕಾರಗೊಳ್ಳಬಹುದು. ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಿರಿ. ನಕಾರಾತ್ಮಕ ಚಿಂತನೆಯನ್ನು ಮಾಡಿ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ: ಇಂದು ನೀವು ಬೇರೆಯವರ ಕಷ್ಟಕ್ಕೆ ಸ್ಪಂದಿಸಬೇಕಾಗಬಹುದು. ಸ್ವಂತ ಕಾರ್ಯಕ್ಕೆ ಸಮಯವನ್ನು ಪ್ರಯತ್ನಪೂರ್ವಕವಾಗಿ ತೆಗೆದುಕೊಳ್ಳಬೇಕಾಗಬಹುದು. ನಿರುದ್ಯೋಗದ ಬಗ್ಗೆ ನಿಮಗೆ ಬೇಸರವಾಗಬಹುದು. ನಿಮ್ಮ ಶಿಸ್ತನ್ನು ಪಾಲಿಸಲಾಗದೇ ಸಹೋದ್ಯೋಗಿಗಳು ಗೊಣಗುವರು.

ಕುಂಭ ರಾಶಿ: ಇಂದು ನಿಮಗೆ ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಡಿಮೆ ಆಗುವುದು. ಬಹಳ ದಿನಗಳ ಅನಂತರ ಹಿರಿಯರ ಭೇಟಿಯಿಂದ ಖುಷಿಯಾಗುವುದು. ಯಂತ್ರೋಪಕರಣಗಳಿಗೆ ನೀವು ಧನವನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಮಾತನ್ನು ಕೇಳುವ ವ್ಯವಧಾನವು ಇಂದು ಕಡಿಮೆ ಇರುವುದು.

ಮೀನ ರಾಶಿ: ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ವ್ಯವಹಾರಿಕ ನಷ್ಟವನ್ನು ಸರಿ ಮಾಡಿಕೊಳ್ಳುವ ಬಗೆಯನ್ನು ಚಿಂತಿಸುವಿರಿ. ದೈವಭಕ್ತಿಯ ಕೊರತೆ ಹೆಚ್ಚು ಇರಲಿದೆ. ನಿಮ್ಮ ಮಾತನ್ನು ಬದಲಾಯಿಸುವಿರಿ. ಮನ ಬಂದಂತೆ ವರ್ತನೆಯನ್ನು ನಿಲ್ಲಿಸಿ. ನಿಮ್ಮವರು ನಿಮಗೆ ಹತ್ತಿರವಾಗಲು ಅನೇಕ‌ ಕಾರಣಗಳು ಇರಬಹುದು.

Leave a Reply

Your email address will not be published. Required fields are marked *