Tue. Apr 8th, 2025

Hyderabad: ಮಗ ಓದುತ್ತಿಲ್ಲ ಎಂದು ಮೂಟೆಯಲ್ಲಿ ಕಟ್ಟಿ ಕೆರೆಗೆ ಬಿಸಾಡಿದ ತಂದೆ – ಮಗ ಬದುಕುಳಿದಿದ್ದು ಹೇಗೆ ಗೊತ್ತಾ?

ಹೈದ್ರಾಬಾದ್ :(ಆ.5) ಮಕ್ಕಳು ಮಾತು ಕೇಳಲ್ಲ, ಓದು ಅಂದ್ರೆ ರಚ್ಚೆ ಹಿಡಿತಾವೆ, ಹೋಮ್‌ ವರ್ಕ್ ಮಾಡು ಅಂದ್ರೆ ನೆಪ ತೆಗಿತಾವೆ. ಅದಕ್ಕೆ ಅವರನ್ನು ರಮಿಸಿ, ಮುದ್ದು ಮಾಡಿ, ಕೊನೆಗೆ ಗದರಿಸಿಯಾದ್ರೂ ಓದಲು ಕೂರಿಸುವ ತಂದೆ ತಾಯಿ ನಮಗೆ ಕಾಣ ಸಿಗ್ತಾರೆ, ಆದ್ರೆ ತೆಲಂಗಾಣದ ಮೆಹಬೂಬ್‌ ನಗರದಲ್ಲಿರುವ ಕೊಲ್ಲಾಪುರದಲ್ಲಿ ಒಬ್ಬ ತಂದೆ ತನ್ನ ಮಗ ಸರಿಯಾಗಿ ಓದುತ್ತಿಲ್ಲ, ಹೇಳಿದ ಮಾತು ಕೇಳುತ್ತಿಲ್ಲ ಎಂದು ಗೋಣಿ ಚೀಲದಲ್ಲಿ ಕಟ್ಟಿ ಕೆರೆಗೆ ಎಸೆದಿದ್ದಾನೆ.

ಇದನ್ನೂ ಓದಿ: 🛑ಮಂಗಳೂರು: ಮ.ನ.ಪಾ ವ್ಯಾಪ್ತಿಯ 10 ಬೀದಿಬದಿ ವ್ಯಾಪಾರಿಗಳಿಗೆ ಮಾತ್ರ ಗುರುತಿನ ಚೀಟಿ: ಮೇಯರ್ ಸುಧೀರ್ ಶೆಟ್ಟಿ

ಮೂಲಗಳ ಪ್ರಕಾರ, ಮೆಹಬೂಬ ನಗರದ ವಾಸಿಯೊಬ್ಬ ತನ್ನ ಮಗನ ನಡುವಳಿಕೆಯಿಂದ, ಓದಲು ಹಠ ಮಾಡುವುದನ್ನು ನೋಡಿ ಕೇಳಿ ರೋಸಿ ಹೋಗಿದ್ದನಂತೆ, ಹೀಗಾಗಿ ಅವನನ್ನು ಚೆನ್ನಾಗಿ ಥಳಿಸಿ ಕೈಕಾಲು ಕಟ್ಟಿ ಒಂದು ಗೋಣಿಚೀಲದಲ್ಲಿ ಇಳಿಸಿ, ಅದನ್ನು ಆಟೋರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಹತ್ತಿರದ ಕೆರೆಯೊಂದರಲ್ಲಿ ಎಸೆದು ಹೋಗಿದ್ದಾನೆ. ಈ ಘಟನೆ ನಡೆಯುವ ವೇಳೆ ಅಲ್ಲಿಯೇ ಇದ್ದ ಕುರಿಗಾಹಿಯೊಬ್ಬ ಇದನ್ನು ಗಮನಿಸಿದ್ದಾನೆ. ಏನಿದೆ ಚೀಲದಲ್ಲಿ ಎಂದು ಕೂಡ ಕೇಳಿದ್ದಾನೆ. ಅದಕ್ಕೆ ಬಾಲಕನ ತಂದೆ, ಚೀಲದಲ್ಲಿರೋದು ನಾಯಿ ಎಂದು ಹೇಳಿ ಅಲ್ಲಿಂದ ಹೊರಟಿದ್ದಾನೆ.

ಕುರಿಗಾಹಿಗೆ ಅನುಮಾನ ಬಂದು, ಗೋಣಿಚೀಲವಿದ್ದ ಕಡೆಗೆ ಓಡಿ ಬಂದು ಬಿಚ್ಚಿ ನೋಡಿದ್ದಾನೆ. ಆವಾಗ ಚೀಲದಲ್ಲಿ ಬಾಲಕ ಅಳುತ್ತಿರೋದನ್ನು ಕಂಡು ಅವಕ್ಕಾಗಿ ಹೋಗಿದ್ದಾನೆ. ಸದ್ಯ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕನ ತಂದೆಯ ವಿರುದ್ಧ ಆಕ್ರೋಶದ ಮಾತುಗಳನ್ನು ಆಡುತ್ತಿದ್ದಾರೆ ನೆಟ್ಟಿಗರು. ಇನ್ನು ಬಾಲಕನ ತಂದೆಯನ್ನು ಸಾಗರ್ ಕರ್ನೂಲ್ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *